Advertisement

Karnataka Politics; ಸಿದ್ದರಾಮಯ್ಯ ಮುಸಲ್ಮಾನರ ದತ್ತು ಪುತ್ರ: ಕೆ.ಎಸ್ ಈಶ್ವರಪ್ಪ ವಾಗ್ದಾಳಿ

01:19 PM Sep 04, 2023 | Team Udayavani |

ಮೈಸೂರು: ಸಿದ್ದರಾಮಯ್ಯ ಮುಸಲ್ಮಾನರ ದತ್ತು ಪುತ್ರರಾಗಿದ್ದಾರೆ. ಮುಸಲ್ಮಾನರ ಜಾಗದಲ್ಲಿ ನಿಂತು ನರೇಂದ್ರ ಮೋದಿ, ಪ್ರತಾಪ್ ಸಿಂಹ ವಿರುದ್ಧ ಮಾತನಾಡಿಬಿಟ್ಟರೆ ಕಾಂಗ್ರೆಸ್‌ಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ. ಅದೇ ಕಾರಣಕ್ಕೆ ಮುಸಲ್ಮಾನರ ಎದುರು ಭಾಷಣ ಮಾಡಿದ್ದಾರೆ. ಇದೆಲ್ಲ ಮುಂದಿನ ಚುನಾವಣೆಯಲ್ಲಿ ನಡೆಯಲ್ಲ‌ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ. ಅವರು ಯಾವಾಗಲೂ ತಮ್ಮ ಶಕ್ತಿ ಮೇಲೆ ಸಿಎಂ ಆಗಿಲ್ಲ.  2013ರಲ್ಲಿ ಕೆಜೆಪಿ- ಬಿಜೆಪಿ ಅಂತ ವಿಭಾಗವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈ ಬಾರಿ ಗ್ಯಾರಂಟಿ ಹೇಳಿಕೊಂಡು ಸಿಎಂ ಆಗಿಬಿಟ್ಟರು.  ಸಿದ್ದರಾಮಯ್ಯ ಅಪ್ಪಿತಪ್ಪಿ ಸಿಎಂ ಆಗಿದ್ದಾರೆ. ಮುಂದೆ ಲೋಕಸಭೆ ಚುನಾವಣೆ ಬರುತ್ತಿದೆ. ಕಾಂಗ್ರೆಸ್‌ನವರ ಸ್ಥಿತಿ ಏನೆಂದು ಗೊತ್ತಾಗುತ್ತದೆ. ಗ್ಯಾರಂಟಿ ಯೋಜನೆಗಳು ಏನಾಗುತ್ತದೆಂದು ನೋಡುತ್ತಿರಿ ಎಂದರು.

ಭಸ್ಮವಾಗ್ತಾರೆ: ಸನಾತನ ಹಿಂದೂ ಧರ್ಮ ಮಲೇರಿಯಾ ಡೆಂಗ್ಯೂ ಇದ್ದಂತೆ ಎಂಬ ಉದಯ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಕಿಡಿಕಾರಿದ ಈಶ್ವರಪ್ಪ, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೆ ಭಸ್ಮವಾಗ್ತಾರೆ. ಇವನೇನು ಆಕಾಶದಿಂದ ಇಳಿದು ಬಂದಿಲ್ಲ. ತಾಕತ್ತಿದ್ದರೆ ಅವನ ಧರ್ಮಕ್ಕೆ ಟೀಕೆ ಮಾಡಲಿ, ಮುಸ್ಲಿಂ ಧರ್ಮಕ್ಕೆ ಟೀಕೆ ಮಾಡಲಿ ನೋಡೋಣ ಎಂದರು.

ಇದನ್ನೂ ಓದಿ:9 ವರ್ಷದಲ್ಲಿ ಪ್ರಧಾನಿ ಮೋದಿ ಒಂದೂ ರಜೆ ಪಡೆದಿಲ್ಲ: ಆರ್‌ ಟಿಐ ಪ್ರಶ್ನೆಗೆ PMO ಪ್ರತಿಕ್ರಿಯೆ

ಟಿಕೆಟ್ ಕೊಟ್ಟರೆ ಸ್ಪರ್ಧೆ: ತಮ್ಮ ಮಗನಿಗೆ ಹಾವೇರಿ ಲೋಕಸಭಾ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನನ್ನ ಮಗ ಕೂಡ ಎಂಪಿ ಟಿಕೆಟ್ ಆಕಾಂಕ್ಷಿ. ಹಾವೇರಿಯಿಂದ ಟಿಕೆಟ್ ಕೇಳಿದ್ದೇವೆ. ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೆಂದು ಕಾದು ನೋಡುತ್ತೇವೆ. ಟಿಕೆಟ್ ಕೊಟ್ಟರೆ ಸ್ಪರ್ದೆ ಮಾಡುತ್ತಾನೆ. ಇಲ್ಲದಿದ್ದರೆ ಟಿಕೆಟ್ ಕೊಟ್ಟವರಿಗೆ ಸಪೋರ್ಟ್ ಮಾಡುತ್ತೇವೆ ಎಂದರು.

Advertisement

ರೇಣುಕಾ ಹೇಳಿಕೆಗೆ ಉತ್ತರವಿಲ್ಲ: ಬೆಂಗಳೂರಿನಲ್ಲಿ ಬಿ.ಎಲ್  ಸಂತೋಷ್ ಸಭೆಯಲ್ಲಿ ಭಾಗವಹಿಸಿದವರು ಪಕ್ಷ ಕಟ್ಟಿದವರಲ್ಲ ಎಂಬ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಟಾರ್ಗೆಟ್ ಕಾಂಗ್ರೆಸ್ ಪಕ್ಷ. ರೇಣುಕಾಚಾರ್ಯಗೆ ಪಕ್ಷದಿಂದ ನೋಟಿಸ್ ನೀಡಲಾಗಿದೆ. ಅವರ ಹೇಳಿಕೆಗೆ ಯಾಕೆ ಮಹತ್ವ ಕೊಡುತ್ತೀರಿ. ನಮ್ಮ ಎದುರಾಳಿ ಕಾಂಗ್ರೆಸ್, ರೇಣುಕಾಚಾರ್ಯ ಹೇಳಿಕೆಗೆ ಉತ್ತರ ಕೊಡಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next