ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಂಡಿತವಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮತಃ ಹಿಂದೂ ಆಗಿದ್ದಾರೆ. ಅವರ ತಂದೆ, ತಾಯಿಗೆ ದೇವರ ಮೇಲೆ ನಂಬಿಕೆ ಇದ್ದುದರಿಂದಲೇ ಅವರ ಹೆಸರನ್ನು ಸಿದ್ದರಾಮ ಎಂದು ಇಟ್ಟಿದ್ದಾರೆ. ಅವರ ದೇಹ ಹಿಂದೂವೇ ಆದರೂ ಮನಸ್ಸು ಹಿಂದೂ ವಿಚಾರವನ್ನು ಅಳವಡಿಸಿಕೊಂಡಿಲ್ಲ ಎಂದರು. ಹಿಂದೂ ಎಂದರೆ ಸರ್ವಧರ್ಮವನ್ನು ಒಪ್ಪುವವರು. ಆದರೆ ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ತಾರತಮ್ಯ ಮಾಡಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದ್ದಾರೆ. ಮನಸ್ಸು ಮಲೀನವಾದರೆ ಅರ್ಥವಿಲ್ಲ ಎಂದು ಹೇಳಿದರು.
Advertisement
ಚುನಾವಣೆ ಸಮೀಪಿಸಿದಾಗ ಜ್ಞಾನೋದಯ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆ ಸಮೀಪ ಬಂದಾಗ ಜ್ಞಾನೋದಯವಾಗಿ “ನಾನು ಹಿಂದೂ’ ಎನ್ನುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಲೇವಡಿ ಮಾಡಿದರು. ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಅವರು ನಾನು ಅಹಿಂದ ಪರ ಎನ್ನುತ್ತಿದ್ದರು. ಆದರೂ ಅವರಿಗೆ ಏನನ್ನೂ ಮಾಡಲಿಲ್ಲ. ಒಂದು ಜಾತಿ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಮೂಲಕ ಮತ ಬ್ಯಾಂಕ್ ಮಾಡುತ್ತಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಬಸವಣ್ಣ, ಅಕ್ಕಮಹಾದೇವಿ ನೆನಪಾಗುತ್ತಿದ್ದಾರೆ.
ಹಿಂದೂಗಳ ಮತಗಳು ಕೈತಪ್ಪುತ್ತವೆ ಎಂಬ ಆತಂಕದಲ್ಲಿ ಈಗ ಅವರಿಗೆ ಮೊದಲ ಬಾರಿಗೆ ನಾನು ಹಿಂದೂ ಎಂದು
ಅನಿಸುತ್ತಿದೆ ಎಂದು ಲೇವಡಿ ಮಾಡಿದರು.