Advertisement

ಸಿಎಂ ವಿರುದ್ಧ 300 ಕೋಟಿ ರೂ. ಭೂ ಹಗರಣ ಬಹಿರಂಗಪಡಿಸಿದ BJP

12:24 PM Oct 10, 2017 | Sharanya Alva |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 300 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು ಕೈಬಿಟ್ಟಿರುವುದಾಗಿ ಬಿಜೆಪಿ ಮಂಗಳವಾರ ಗಂಭೀರವಾಗಿ ಆರೋಪಿಸಿದೆ.

Advertisement

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಬಿಜೆ ಪುಟ್ಟಸ್ವಾಮಿ ಮಾತನಾಡುತ್ತ, ಬೆಂಗಳೂರು ಉತ್ತರ ವಲಯದ ಭೂಪಸಂದ್ರದ ಸರ್ವೆ ನಂಬ್ರ 20, 21ರಲ್ಲಿನ 6.26 ಎಕರೆ ಬೆಲೆ ಬಾಳುವ ಭೂಮಿಯನ್ನು ಸಿಎಂ ಸಿದ್ದರಾಮಯ್ಯನವರು ಡಿನೋಟಿಫೈ ಮಾಡಿರುವುದಾಗಿ ದೂರಿದರು.

ಡಿನೋಟಿಫಿಕೇಶನ್ ಆಗಿರುವ ಭೂಮಿಯ ಮೂಲ ಮಾಲೀಕರು ಸೈಯದ್. ಸೈಯದ್ ಅವರು ಸ್ವತಃ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಈ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿದ್ದಾರೆ. ಈ ಭೂಮಿಯನ್ನು ಬೇರೊಬ್ಬರ ಹೆಸರಿಗೆ ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next