Advertisement

ಅಹಿಂದ ವರ್ಗಗಳಿಗೆ ಸಿದ್ದರಾಮಯ್ಯ ಅನ್ಯಾಯ: ನಳಿನ್‌ ಕುಮಾರ್‌

11:26 PM Oct 11, 2022 | Team Udayavani |

ಹಾವೇರಿ: ಅಹಿಂದ ಚಳವಳಿ ಮಾಡಿ ಅಹಿಂದ ವರ್ಗಗಳಿಗೆ ಸಿದ್ದರಾಮಯ್ಯ ಅವರಿಂದ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ನಾವು ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ . ಅದರ ಕ್ರೆಡಿಟ್‌ ತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಹಿಂದ ಚಳವಳಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲಿಲ್ಲ. ಅವರು ಸಿಎಂ ಆಗಿದ್ದ ಸಂದರ್ಭ ಏಕೆ ಮೀಸಲಾತಿ ಕೊಡಲಿಲ್ಲ.

ಸಿಎಂ ಆಗಿ ಐದು ವರ್ಷ ಅಧಿಕಾರದಲ್ಲಿದ್ದು, ಆ ಭಿಕ್ಷೆಯಡಿಯಲ್ಲಿ, ಆ ಕೋಟಾದಡಿಯಲ್ಲಿ ಸಿಎಂ ಆದರೂ ನ್ಯಾಯ ಕೊಡುವ ಕೆಲಸ ಮಾಡಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next