Advertisement
ಕೊಪ್ಪಳದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯ ಸರಕಾರದಿಂದ ಪಿ.ಎಫ್.ಐ ಬ್ಯಾನ್ ಆಗಿದೆ. ಆದರೆ ಹಿಂದೆ ಮಂಗಳೂರು, ಬೆಂಗಳೂರು, ಮೈಸೂರಿನ ಜೈಲಿನಲ್ಲಿದ್ದ ಪಿ.ಎಫ್.ಐ ಕಾರ್ಯಕರ್ತರನ್ನು ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿದರು. ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ರಾಜಕಾರಣ ಮಾಡುತ್ತಾ ಬಂದಿದ್ದಾರೆ ಎಂದರು.
Related Articles
Advertisement
ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರಕಾರವಿದೆ. ಅಭಿವೃದ್ಧಿ ಕೆಲಸಕ್ಕೆ ಡಬಲ್ ಎಂಜನ್ ಸರಕಾರ ಬರಬೇಕೆಂದು ಮೋದಿ ಹೇಳಿದ್ದಾರೆ. ಹಿಂದೆ ಭಾರತ ಪ್ರಧಾನಿಗಳು ವಿದೇಶಕ್ಕೆ ಹೋದರೆ ಸಾಲಕ್ಕಾಗಿ, ಭಿಕ್ಷೆಗಾಗಿ ಬರುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈಗ ಭಾರತ ಪ್ರಬಲವಾಗಿದೆ. ಉಕ್ರೇನ್ ರಷ್ಯಾದ ಯುದ್ದದಲ್ಲಿ ಭಾರತದ ಪ್ರಧಾನಿ ಹೇಳಿದಂತಾಗಿದೆ. ಪ್ರಧಾನಿಯವರು ಈಗಲೂ 2024 ರ ಚುನಾವಣೆಯ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿಯವರು ಅಭಿವೃದ್ದಿ ಗುರಿಯಾಗಿಟ್ಟುಕೊಂಡು ಮಾತನಾಡುತ್ತಾರೆ ಎಂದರು.
ಸಂಸದರ ನಿಧಿಯನ್ನು ಆಸ್ಪತ್ರೆಯ ಉನ್ನತೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಕೃಷಿ ಬಜೆಟ್ ಯುಪಿಎ ಸರಕಾರದಲ್ಲಿ 23 ಸಾವಿರ ಕೋಟಿ ರೂಪಾಯಿ ಇತ್ತು. ಈಗ ಬಜೆಟ್ ನಲ್ಲಿ 1.25 ಲಕ್ಷ ಕೋಟಿ ರೂಪಾಯಿ ಕೃಷಿಗೆ ಇಟ್ಟಿದೆ. ಕೃಷಿ ಮೂಲಭೂತ ಸೌಲಭ್ಯಕ್ಕೆ ಲಕ್ಷ ಕೋಟಿ ನೀಡಲಾಗಿದೆ. ಎಂಎಸ್ ಪಿ ದರ ಹೆಚ್ಚಳ ಮಾಡಿದೆ. ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ನೀಡಲಾಗಿದೆ ಎಂದರು.
ಅಮಿತಾ ಶಾ ಆಮೂಲ್ ಒಂದು ಮಾಡಲು ಹೇಳಿಲ್ಲ. ಅಮೂಲ್ ಮಾದರಿಯಲ್ಲಿ ಬೆಳೆಯಲು ಟೆಕ್ನಿಲಾಜಿ ಬಳಸಿಕೊಳ್ಳಲು ಹೇಳಿದ್ದಾರೆ. ಇಂಧನ ಹಾಗು ಖಾದ್ಯ ತೈಲ್ ಗಳನ್ನು ಆತ್ಮ ನಿರ್ಭರ ಯೋಜನೆಗೆ ಒಳಪಡಿಸಲು ಮುಂದಾಗಿದೆ ಎಂದರು.