Advertisement

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

12:54 AM May 19, 2024 | Team Udayavani |

ಬೆಂಗಳೂರು: ಇದೇ ತಿಂಗಳು 20ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಒಂದು ವರ್ಷ ಪೂರೈಸಲಿದೆ. ಆದರೆ ಸಂಭ್ರಮಾಚರಣೆ ನಡೆಸುವುದಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ.

Advertisement

ವಿಧಾನಸಭಾ ಚುನಾವಣೆಗೆ ಮುನ್ನ ಜನತೆಗೆ ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಹಲವು ಸವಾಲುಗಳ ಮಧ್ಯೆಯೂ ಸಮರ್ಪಕವಾಗಿ ಅನುಷ್ಠಾನ ಗೊಳಿಸಿರುವ ರಾಜ್ಯ ಸರಕಾರವು ಅದರ ನೆರಳಿನಲ್ಲೇ ಲೋಕ ಸಭಾ ಚುನಾವಣೆ ಯನ್ನು ಎದುರಿಸಿದೆ.

ಈ ಸಾಧನೆಯ ಬಲದಿಂದಲೇ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗಳಿಕೆಯ ವಿಶ್ವಾಸವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿ ದ್ದಾರೆ. ಆದರೆ ಚುನಾವಣೆ ನೀತಿ ಸಂಹಿತೆ ಕಾರಣ ಸಂಭ್ರಮಾಚರಣೆ ನಡೆಸದೆ ಇರಲು ಸರಕಾರ ನಿರ್ಧರಿಸಿದೆ.

ಸಿಎಂ ಕಚೇರಿ ಮೂಲಗಳ ಪ್ರಕಾರ ಸೋಮವಾರ ಸಾಂಕೇತಿಕವಾಗಿಯೂ ಯಾವುದೇ ಕಾರ್ಯಕ್ರಮ ನಡೆಸದಿರಲು ತೀರ್ಮಾನಿಸಲಾಗಿದೆ. ಫ‌ಲಿತಾಂಶದ ಯಶಸ್ಸು ಆಧರಿಸಿ ವಿಜೃಂಭಣೆಯಿಂದ ಕಾರ್ಯಕ್ರಮ ಆಯೋಜಿ ಸುವ ಲೆಕ್ಕಾಚಾರವೂ ಇದೆ. ಆದರೆ ವರ್ಷದ ಸಾಧನೆಯನ್ನು ಸಚಿವರು ಹಾಗೂ ನಾಯಕರು ಜಾಲತಾಣಗಳಲ್ಲಿ ಹಂಚಿಕೊಳ್ಳಲಿದ್ದಾರೆ.

ಬಿಜೆಪಿಯಿಂದ ಹೋರಾಟ
ಅತ್ತ ಕಾಂಗ್ರೆಸ್‌ ಸರಕಾರ ಒಂದು ವರ್ಷ ಪೂರೈಸಲಿದ್ದರೆ ಇತ್ತ ಸರಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಜ್ಜಾಗಿದೆ. ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಸ್ಥಗಿತಗೊಂಡಿದೆ. ಕಾನೂನು-ಸುವ್ಯವಸ್ಥೆ ಹಳಿ ತಪ್ಪಿದ್ದು, ಕೊಲೆ-ಅತ್ಯಾಚಾರ ಸಾಮಾನ್ಯವಾಗಿದೆ. ಓಲೈಕೆ ನೀತಿಯಿಂದ ಜನರು ಭಯದಲ್ಲಿ ಬದುಕು ವಂತಾಗಿದೆ ಎಂದು ಆರೋಪಿಸಿರುವ ಬಿಜೆಪಿ, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಲು ನಿರ್ಧರಿಸಿದೆ.

Advertisement

-ಸಾಂಕೇತಿಕವಾಗಿಯೂಯಾವುದೇ ಕಾರ್ಯಕ್ರಮ ನಡೆಸದಿರಲು ನಿರ್ಧಾರ
-ವರ್ಷದ ಸಾಧನೆಯನ್ನು ಜಾಲತಾಣ ಗಳಲ್ಲಿ ಹಂಚಿಕೊಳ್ಳಲಿರುವ ಸಚಿವರು
-ಚುನಾವಣೆಗೆ ಮುನ್ನವೇ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸಿದ್ದ ಸರಕಾರ
-ಫ‌ಲಿತಾಂಶದ ಯಶಸ್ಸು ಆಧರಿಸಿ ವಿಜೃಂಭಣೆಯ ಕಾರ್ಯಕ್ರಮ ಏರ್ಪಡಿಸಲು ಯೋಜನೆ

ನಾಳೆ ಬಿಜೆಪಿ ಪ್ರತಿಭಟನೆ
ಸರಕಾರದ ವಿರುದ್ಧ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಈ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಸೋಮವಾರ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ವಿಪಕ್ಷಗಳ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಆಯೋಜಿಸುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next