Advertisement

Davanagere: ಸಿದ್ದರಾಮಯ್ಯ ಸರ್ಕಾರ ಐಸಿಯು ವಾರ್ಡ್‌ ನಲ್ಲಿದೆ: ರೇಣುಕಾಚಾರ್ಯ

02:21 PM Dec 08, 2024 | Team Udayavani |

ದಾವಣಗೆರೆ: ಸಿದ್ದರಾಮಯ್ಯ ಸರ್ಕಾರ ಐಸಿಯು ವಾರ್ಡ್‌ ನಲ್ಲಿದ್ದು ಯಾವುದೇ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ  ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಬೇಕು ಹಾಗೂ ಈ ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿದರು.

ಬಾಣಂತಿಯವರ ಸಾವು ಪ್ರಕರಣದಲ್ಲಿ ನಕಲಿ ಔಷಧಿ ಪೂರೈಕೆಯೇ ಕಾರಣವಾಗಿದ್ದು, ಇದು ಸಂಪೂರ್ಣ ತನಿಖೆಯಾಗಬೇಕು. ಕೋವಿಡ್ ಸಂದರ್ಭದಲ್ಲಿ ಭ್ರಷ್ಟಚಾರ ನಡೆದಿದೆ ಎನ್ನುವ ನೀವು ನಕಲಿ ಔಷಧ ಪೂರೈಸುವ ಕಂಪನಿಯಿಂದ ಎಷ್ಟು ಪರ್ಸಂಟೇಜ್ ಪಡೆದಿದ್ದೀರಿ? ಮುಡಾ ಸೇರಿದಂತೆ ಇನ್ನಿತರ ಹಗರಣಗಳು ಅವರಿಗೆ ಸುತ್ತಿಕೊಂಡಿದ್ದು ಈ ವಿಚಾರವಾಗಿ ಇಡಿ ನೊಟೀಸ್ ನೀಡಿದೆ.  ಸಿದ್ದರಾಮಯ್ಯ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಹಾಗಾಗಿಯೇ ಅವರು ಚಾಮರಾಜನಗರದಲ್ಲಿ ಇದು ತಮ್ಮ ಅಧಿಕಾರದ ಕೊನೆಯ ದಿನಗಳೆಂದು ಹೇಳಿದ್ದು ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಖಚಿತ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರವಾಗಿ ಯಾರೂ ಪರ-ವಿರೋಧ ಚರ್ಚೆ, ಹೇಳಿಕೆ ಕೊಡಬಾರದು ಎಂದು ರಾಷ್ಟ್ರೀಯ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡ ಭಾವನೆಯನ್ನು ಈಗಾಗಲೇ ಮುಖಂಡರ ಎದುರು ವ್ಯಕ್ತಪಡಿಸಿದ್ದೇವೆ. ಹಾಗಾಗಿ ನಾವು ಈಗ ಅದರ ಬಗ್ಗೆ ಏನೂ ಮಾತನಾಡುವುದಿಲ್ಲ. ಪಕ್ಷದಲ್ಲಿನ ಯಾವುದೇ ಗೊಂದಲ ಇದ್ದರೂ ಅದಕ್ಕೆ ರಾಷ್ಟ್ರೀಯ ಮುಖಂಡರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next