Advertisement

ಮತ್ತೆ ಚಿಗುರೊಡೆದ ಸಿದ್ದು ಸಿಎಂ ಕನಸು

04:52 PM Apr 21, 2019 | mahesh |

ಹುಬ್ಬಳ್ಳಿ: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿಯಲ್ಲಿ ಚುನಾವಣ ಭಾಷಣ ಸಂದರ್ಭದಲ್ಲಿ ನಾನು ಮತ್ತೂಮ್ಮೆ ಮುಖ್ಯಮಂತ್ರಿಯಾದರೆ ಅನ್ನಭಾಗ್ಯ ಯೋಜನೆ ಯಲ್ಲಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿರುವ ವಿಚಾರ ರಾಜಕೀಯ ವಲಯದಲ್ಲಿ ವಿವಿಧ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿ ಆಗುವ ಹಂಬಲದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅಭಿಪ್ರಾಯದಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Advertisement

ಈ ನಡುವೆ ಮಾಜಿ ಸಚಿವ ಆಂಜನೇಯ ದಾವಣಗೆರೆಯಲ್ಲಿ ಮಾತ ನಾಡಿ, ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ರಾಗಿರುವ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ ಬೇಕು. ಅವರ ಆಡಳಿತ ಸುವರ್ಣ ಕಾಲ. ಎಲ್ಲ ಸಮುದಾಯಕ್ಕೆ ಆರ್ಥಿಕ ಸೌಲಭ್ಯ ಒದಗಿಸಿದ್ದಾರೆ ಎಂದರು.
ಈಶ್ವರಪ್ಪ ಟಾಂಗ್‌ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗದಲ್ಲಿ ಟಾಂಗ್‌ ನೀಡಿರುವ ಕೆ.ಎಸ್‌. ಈಶ್ವರಪ್ಪ, ಚುನಾವಣೆಗೆ ನಿಲ್ಲುವು ದಿಲ್ಲ ಎಂದು ಹೇಳಿದ್ದ ಸಿದ್ದ ರಾಮಯ್ಯ ಮುಖ್ಯಮಂತ್ರಿ ಹೇಗೆ ಆಗುತ್ತಾರೆ? ಡಿ.ಕೆ. ಶಿವಕುಮಾರ್‌, ಜಿ. ಪರಮೇಶ್ವರ್‌, ಖರ್ಗೆ ಅವರಂಥ ಘಟಾನುಘಟಿ ನಾಯಕರು ಸಿದ್ದರಾಮಯ್ಯರನ್ನು ಮತ್ತೆ ಮುಖ್ಯಮಂತ್ರಿ ಆಗಲು ಬಿಡುವುದಿಲ್ಲ ಎಂದರು.

ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುತ್ತಿದ್ದು, ಡಿ.ಕೆ.ಶಿ., ಕುಮಾರಸ್ವಾಮಿ ಅವರೇ ಇದಕ್ಕೆ ಅಡ್ಡಗಾಲು ಹಾಕುತ್ತಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಅಧಿಕಾರಕ್ಕಾಗಿ ಕಚ್ಚಾಟ ನಡೆದಿದೆ ಎಂದು ಹರಿಹಾಯ್ದರು.

ಸಿದ್ದು ಹೇಳಿದ್ದೇನು?
ಬಳ್ಳಾರಿ ಜಿಲ್ಲೆ ಸಿರಗುಪ್ಪದಲ್ಲಿ ಶುಕ್ರವಾರ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಹಿಂದೆ ಮುಖ್ಯಮಂತ್ರಿ ಯಾಗಿದ್ದಾಗ ಅನ್ನಭಾಗ್ಯ ಯೋಜನೆಯಡಿ ಐದು ವರ್ಷಗಳ ಕಾಲ ನಿರಂತರವಾಗಿ ಏಳು ಕೆ.ಜಿ. ಅಕ್ಕಿಯನ್ನು ಕೊಟ್ಟಿದ್ದೇವೆ. ಮತ್ತೂಮ್ಮೆ ಮುಖ್ಯಮಂತ್ರಿ ಯಾದರೆ ಇದನ್ನು 10 ಕೆ.ಜಿ.ಗೆ ಏರಿಕೆ ಮಾಡುತ್ತೇನೆ. ರಾಜ್ಯದ ಯಾವೊಬ್ಬ ಬಡವರು, ಕೂಲಿ ಕಾರ್ಮಿಕರು ಹಸಿವಿ ನಿಂದ ಬಳಲಬಾರದೆಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಸದ್ಯ ಮೈತ್ರಿ ಸರಕಾರದಲ್ಲೂ ಅದನ್ನು ಮುಂದುವರಿಸಲಾಗುತ್ತಿದೆ. ಮತ್ತೂಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಕೊಟ್ಟರೆ ಎಲ್ಲ ಬಡವರಿಗೂ 10 ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದರು.

ಸನ್ಯಾಸಿ ಏನಲ್ಲ
ಬನಹಟ್ಟಿಯಲ್ಲಿ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಸಿದ್ದ ರಾಮಯ್ಯ ಸನ್ಯಾಸಿ ಏನಲ್ಲ. ಮತ್ತೆ ಸಿಎಂ ಆಗುತ್ತೇನೆ ಎಂಬ ಹೇಳಿಕೆಗೆ ಅಪಾರ್ಥ ಮಾಡಿ ಕೊಳ್ಳುವ ಆವಶ್ಯಕತೆ ಇಲ್ಲ. ಚುನಾವಣೆ ಬಳಿಕ ನಾನು ಸಿಎಂ ಆಗ್ತಿನಿ ಎಂದು ಹೇಳಿರೋದು ಸಹಜವಾಗಿದೆ. ಹೀಗಾಗಿ ಚುನಾವಣೆಯಾದ ಬಳಿಕ ಯಾರ್ಯಾರಹಣೆ ಬರಹದಲ್ಲಿ ಏನೇನಿದೆಯೋ ಅದು ಆಗುತ್ತದೆ. ಸದ್ಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯಲು ಪ್ರಚಾರ ಮಾಡುತ್ತಿದ್ದೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next