Advertisement
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವ: ಜನತಾ ಪರಿವಾರದಲ್ಲಿದ್ದಾಗ ಹಾಗೂ ನಂತರ ಕಾಂಗ್ರೆಸ್ ಸೇರಿದಾಗ ಈ ಎರಡೂ ಜಿಲ್ಲೆಗಳ ರಾಜ ಕಾರಣದಲ್ಲಿ ಸಿದ್ದರಾಮಯ್ಯ ಅಧಿಪತ್ಯ ಸ್ಥಾಪಿಸಿ ದ್ದರು. ಅಸೆಂಬ್ಲಿಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗೂ ಏರಿದರು. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಸ್ವತಃ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡರು. ನಂತರ ನಡೆದ ಮೈಸೂರು, ಚಾಮರಾಜನಗರ ಎರಡೂ ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋತಿತು. ಇದರಿಂದ ಸಿದ್ದರಾಮಯ್ಯ ಕೆಲವು ದಿನ ಮೈಸೂರಿಗೆ ಭೇಟಿ ಕೊಟ್ಟಿರಲಿಲ್ಲ. ಈಗ, ಚುನಾವಣೆಯನ್ನು ಸಿದ್ದರಾಮಯ್ಯ ಸವಾಲಾಗಿ ಸ್ವೀಕರಿಸಿದ್ದು ಜಿಲ್ಲೆಯಲ್ಲಿ ತಮ್ಮ ನಾಯಕತ್ವ ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದಾರೆ.
Related Articles
Advertisement
ಸಿಂಗಲ್ ವೋಟು ನೀಡಲು ಸೂಚನೆ : ಕಾಂಗ್ರೆಸ್ ದ್ವಿಸದಸ್ಯ ಕ್ಷೇತ್ರದ ಈ ಚುನಾವಣೆಯಲ್ಲಿ ತಮಗಿರುವ ಬೆಂಬಲದ ಆಧಾರದ ಮೇಲೆ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪ್ರತಿ ಮತದಾರರಿಗೆ 2 ಮತ ನೀಡಲು ಅವಕಾಶವಿದ್ದರೂ ಸಿಂಗಲ್ ವೋಟು ನೀಡುವಂತೆ ತಮ್ಮ ಬೆಂಬಲಿತ ಮತದಾರರಿಗೆ ಕಾಂಗ್ರೆಸ್ ಸೂಚನೆ ನೀಡಿದೆ. ಪ್ರಾಶಸ್ತ್ಯದ ಮತಗಳ ಚುನಾವಣೆ ಇದಾಗಿದ್ದರೂ ರಿಸ್ಕ್ ತೆಗೆದುಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ಕೂಡ ತಮ್ಮ ಅಭ್ಯರ್ಥಿಗಳಿಗೆ ಸಿಂಗಲ್ ವೋಟು ನೀಡುವಂತೆ ಪ್ರಚಾರ ನಡೆಸಿದೆ. ಈ ಎರಡೂ ಪಕ್ಷಗಳ ನಾಯಕರೂ ತಮ್ಮ ಬೆಂಬಲಿತ ಮತದಾರರ 2ನೇ ಪ್ರಾಶಸ್ತ್ಯದ ಮತಗಳ ಚಲಾವಣೆ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ.
ಇದು ಪ್ರಾಶಸ್ತ್ಯದ ಮತಗಳ ಚುನಾವಣೆ. ಜೆಡಿಎಸ್‌ನಿಂದ ದೂರ ಸರಿದಿರುವ ನಾನು ಈ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಎರಡನ್ನೂ ಬೆಂಬಲಿಸುತ್ತೇನೆ. ಒಂದು ಮತ ಬಿಜೆಪಿಗೆ ಮತ್ತೂಂದು ಮತ ಕಾಂಗ್ರೆಸ್‌ಗೆ ನೀಡುವಂತೆ ಬೆಂಬಲಿಗರಲ್ಲಿ ಮನವಿ ಮಾಡುವೆ. ● ಸಂದೇಶ್ ನಾಗರಾಜ್, ವಿಧಾನಪರಿಷತ್ ಸದಸ್ಯ ಕಾಂಗ್ರೆಸ್,
ಬಿಜೆಪಿ, ಜೆಡಿಎಸ್ ನಾಯಕರು ಅವರ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಕೇಳಲಿ. ಆದರೆ, 2ನೇ ಪ್ರಾಶಸ್ತ್ಯದ ಮತಗಳನ್ನು ಯಾರಿಗೂ ನೀಡಬಾರದೆಂದು ಹೇಳುವುದು ಸರಿಯಲ್ಲ. ಇದು ಮತದಾರರ ಹಕ್ಕಿಗೆ ಚ್ಯುತಿ ತಂದಂತೆ. – ವಾಟಾಳ್ ನಾಗರಾಜ್, ಅಭ್ಯರ್ಥಿ
-ಕೂಡ್ಲಿ ಗುರುರಾಜ