Advertisement

Siddaramaiah; ಶೋಷಿತರ ಪರ ಇದ್ದಿದ್ದಕ್ಕೆ ಮಸಿ ಬಳಿಯುವ ಯತ್ನ

01:10 AM Oct 07, 2024 | Team Udayavani |

ಬೆಂಗಳೂರು: ಕುರಿ ಕಾಯುವವನ ಮಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಸಹಿಸಲಾಗುತ್ತಿಲ್ಲ ಎಂದು ಹೇಳಿದ್ದ ಬೆನ್ನಲ್ಲೇ ಮತ್ತೂಂದು ಭಾವನಾತ್ಮಕ ದಾಳ ಉರುಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಸಾಮಾಜಿಕ ನ್ಯಾಯದ ಪರವಾಗಿ, ಶೋಷಿತರ ದಮನಿತರ ಪರವಾಗಿ ಹಾಗೂ ಜಾತಿ ವ್ಯವಸ್ಥೆ ವಿರುದ್ದವಾಗಿ ಇದ್ದೇನೆ ಎನ್ನುವ ಕಾರಣದಿಂದ ನನ್ನ ಮೇಲೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

Advertisement

ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ವಿ.ಎಸ್‌. ಉಗ್ರಪ್ಪ ಅವರ ಕುರಿತ “ಸಮರ್ಥ ಜನನಾಯಕ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯದ ಪರವಾಗಿ ಇದ್ದೇನೆ ಎಂಬ ಕಾರಣಕ್ಕಾಗಿ ಕೆಲವರು ನನ್ನ ಮೇಲೆ ಮಸಿ ಬಳಿಯುವ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನ ಏನಾಗುತ್ತೋ ನೋಡೋಣ. ಈ ಬಗ್ಗೆ ಮಾತನಾಡುವುದಿಲ್ಲ. ಅದು ಜನರಿಗೂ ಗೊತ್ತಿದೆ. ಉಗ್ರಪ್ಪ ಮತ್ತು ನಾನು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಂಡವರಲ್ಲ. ಈ ಕಾರಣಕ್ಕೇ ನನಗೆ ಮಸಿ ಬಳಿಯಲು ಕೆಲವರು ಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನಗಳು ಹೇಗೆ ಯಶಸ್ವಿ ಆಗ್ತದೆ ನಾನೂ ನೋಡ್ತೀನಿ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ಕೂಡ ರವಾನಿಸಿದರು.

ಬಡವರ ಪರ ಯೋಜನೆ ತಂದ ಸಿದ್ದರಾಮಯ್ಯಗೆ ಕಾಟ: ಸಿಂಧ್ಯಾ
ಗಾಜಿನ ಮನೆಯಲ್ಲಿ ಕುಳಿತವರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಸಿಎಂ ರಾಜೀನಾಮೆ ಕೇಳಲು ಅವರು ಯಾರು? ಎಂದು ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಕಿಡಿಕಾರಿದರು. ಜನತಾ ಪರಿವಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ದೇವರಾಜ ಅರಸು ಮತ್ತು ಬಂಗಾರಪ್ಪ ಕಾರಣರಾಗಿದ್ದಾರೆ. ದೇವರಾಜ ಅರಸರು ಬಡವರ ಪರವಾದ ಕಾರ್ಯಕ್ರಮ ರೂಪಿಸಿದರು. ಅಂಥವರನ್ನೇ ಕೆಲವರು ಕಟಕಟೆಗೆ ನಿಲ್ಲಿಸಿದರು. ಅಂಥವರೇ ಈಗ ಹಲವು ಯೋಜನೆ ಜಾರಿ ತಂದಿರುವ ಸಿದ್ದರಾಮಯ್ಯ ಅವರನ್ನು ಅದೇ ರೀತಿ ಕಾಟ ಕೊಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಬಂಡೆ ರೀತಿ ನಿಮ್ಮ ಹಿಂದೆ ಇದ್ದಾರೆ. ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next