ಕೊಪ್ಪಳ: ಸಚಿವ ಅಶ್ವತ್ಥನಾರಾಯಣ ಎನ್ನುವಾತ ಟಿಪ್ಪುವನ್ನು ಹೊಡೆದು ಹಾಕಿದಂತೆ ನನ್ನನ್ನು ಹೊಡೆದಾಕಬೇಕೆಂದು ಹೇಳಿದ್ದಾನೆ. ಅವನು ಅಶ್ವತ್ಥ ನಾರಾಯಣ ಅಲ್ಲ, ಅವನೊಬ್ಬ ಅಸ್ವಸ್ಥ ನಾರಾಯಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಯಲಬುರ್ಗಾದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಅವನಿಗೆ ಮೆಂಟಲ್ ಕಾಯಿಲೆ ಇರಬೇಕು. ಇಂತಹವರು ಅಧಿಕಾರದಲ್ಲಿ ಇರಬೇಕಾ ಎಂದರು.
ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ರಸ್ತೆ, ನೀರು, ರೈತರ ಬಗ್ಗೆ ಮಾತನಾಡುತ್ತಿಲ್ಲ. “ಲವ್ ಜಿಹಾದ್’ ಬಗ್ಗೆ ಮಾತನಾಡು ಅಂತಾ ಕಟೀಲ್ ಹೇಳ್ತಾನೆ. ಅಮಿತಾ ಶಾ ರಾಜ್ಯಕ್ಕೆ ಬಂದು ಟಿಪ್ಪು ಸುಲ್ತಾನ್ ವಿರುದ್ಧ ಅಬ್ಬಕ್ಕ ಅಂತ ಹೇಳುತ್ತಾರೆ ಎಂದರು.
ಜನರು ಸಾಮರಸ್ಯದಿಂದ ಇರಬೇಕಿರುವುದು ಬಿಜೆಪಿಗೆ ಬೇಕಿಲ್ಲ. ಜನರು ಬಡಿದಾಡಿಕೊಂಡು ಇರಬೇಕು. ಒಡೆದಾಳುವ ನೀತಿ ಬಿಜೆಪಿಯಲ್ಲಿದೆ. ಬಿಜೆಪಿಯವರು ಸಮಾಜ ಸೇವೆ ಮರೆತಿದ್ದಾರೆ. ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ. ಮತ್ತೆ ಮಾರ್ಚ್‌ನಲ್ಲಿ ನಿಮ್ಮ ಊರಿಗೆ ಬರುವೆ. ರಾಯರಡ್ಡಿ ಸೋಲುವ ವ್ಯಕ್ತಿಯಲ್ಲ. ಯಾಕೆ ಜನರು ಅವರ ಕೈಹಿಡಿದಿಲ್ಲ ಗೊತ್ತಿಲ್ಲ. ಈ ಬಾರಿ ರಾಯರಡ್ಡಿ ನೂರಕ್ಕೆ ನೂರು ಗೆಲ್ಲುತ್ತಾರೆ. ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ. ಈ ಬಾರಿ ಜನರು ಕಾಂಗ್ರೆಸ್‌ನ ಮೇಲೆ ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪರ ಅಲೆಯಿದೆ ಎಂದರು.