ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರರಿಗೆ ಮಂತ್ರಿ ಪಟ್ಟ ತಪ್ಪಿಸುವುದಕ್ಕಾಗಿ ಸಂಪುಟವನ್ನೇ ವಿಸ್ತರಣೆ ಮಾಡಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪರಿಗೆ ಬಿಜೆಪಿ ಅನ್ಯಾಯ ಮಾಡಿತು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿ ಆರೆಸ್ಸೆಸ್‌ನವರು ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದರು.
ಈಗ ಬಿಎಸ್‌ವೈ ಹಾಗೂ ಬಸವರಾಜ ಬೊಮ್ಮಾಯಿ ನಡುವೆ ಆಗಿ ಬರುತ್ತಿಲ್ಲ. ಬಿಎಸ್‌ವೈ ಮಗನಿಗೆ ಮಂತ್ರಿ ಮಾಡದಿರುವ ಜತೆಗೆ, ಹೆಚ್ಚು ಲಂಚ ಸಿಗಲಿ ಎಂಬ ಕಾರಣಕ್ಕೆ ಎಲ್ಲ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಂಡರು ಎಂದರು.
ಚುನಾವಣೆ ಬಳಿಕ ಯಾರು ತೀರ್ಥಯಾತ್ರೆಗೆ ಹೋಗುತ್ತಾರೆ ಎಂಬುದು ಗೊತ್ತಾಗುತ್ತದೆ. ಅವರಿಗಿಂತ ಎಷ್ಟೋ ವರ್ಷಗಳಿಗಿಂತ ಮುಂಚೆ ರಾಜಕೀಯಕ್ಕೆ ಬಂದವನು ನಾನು. ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು.