Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ ಅದನ್ನು ಚೇತರಿಕೆ ಹಾದಿಗೆ ತರುತ್ತಾರೆ ಎಂಬ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ. ಬಹಳ ಜನರು ಕೊರೊನಾ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿದ್ದರು. ಅವರಿಗೆ ಉದ್ಯೋಗ ಸೃಷ್ಟಿಸುವ ಪ್ರಯತ್ನ ಮಾಡಿಲ್ಲ.
Related Articles
Advertisement
ಓದಿ : ಹಣ್ಣುಗಳಲ್ಲೇ ಶ್ರೇಷ್ಠವಾದದ್ದು ಮೊಸುಂಬಿ – ನಿಮಗಿದು ಗೊತ್ತೇ?
ದೇಶದಲ್ಲಿ ವಿತ್ತೀಯ ಕೊರತೆ ಹೆಚ್ಚಾಗುತ್ತಿದೆ. ನರೇಂದ್ರ ಮೋದಿ ಬಂದ ಮೇಲೆ ನಿತ್ಯ ಜಿಡಿಪಿ ಕುಸಿಯುತ್ತಲೇ ಇದೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಜಿಡಿಪಿ 9 ರಷ್ಟಿತ್ತು. ಆರ್ಥಿಕ ಸಮೀಕ್ಷೆ ಪ್ರಕಾರ ಜಿಡಿಪಿ 4.2 ರಷ್ಟಿದೆ. ಇದರಿಂದ ಉದ್ಯೋಗ ಸೃಷ್ಟಿ ಎಲ್ಲಿ ಆಗುತ್ತದೆ. ಜಿಡಿಪಿ ಈ ವರ್ಷ ಮೈನಸ್ 7 ಇದೆ. ಅದನ್ನು 11 ಕ್ಕೆ ಹೆಚ್ಚಿಸುವುದಾಗಿ ಹೇಳಿದ್ದಾರೆ. ಎಂಥಾ ಸುಳ್ಳಿನ ಕಂತೆ ಇದು. ಅಂಕಿ ಅಂಶಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡಿದರೆ ನಿಮಗೆ ನಡೆಸಲು ಯೋಗ್ಯತೆ ಇಲ್ಲ ಎಂದರ್ಥ. ಇದರಿಂದ ಸಾಮಾಜಿಕ ನ್ಯಾಯ ಉಳಿಸಲು ಸಾಧ್ಯವಾಗುವುದಿಲ್ಲ. ಅಂಬಾನಿ ಅದಾನಿ ಬಂದರೆ ಮೀಸಲಾತಿ ಉಳಿಯುತ್ತಾ..? ಇದು ಮೀಸಲಾತಿ ತೆಗೆಯುವ ಹುನ್ನಾರ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ(ಫೆ.1, 2021) ಲೋಕಸಭೆಯಲ್ಲಿ ಮಂಡಿಸಿದ್ದು, ಬೆಂಗಳೂರು ಮೆಟ್ರೋ 2ಎ ಹಾಗೂ 2ಬಿ ಯೋಜನೆಗೆ 14,788 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ.
ಓದಿ : ಇತಿಹಾಸದಲ್ಲಿ ಇಂತಹ ನಿರುತ್ಸಾಹಿ ಬಜೆಟ್ ಇನ್ನೊಂದಿಲ್ಲ: ಡಿ ಕೆ ಶಿವಕುಮಾರ್ ಟೀಕೆ