Advertisement

Siddapura; ಕೋಳಿ ಅಂಕಕ್ಕೆ ಪೊಲೀಸರ ದಾಳಿ; ಆರೋಪಿಗಳ ಸೆರೆ

08:17 PM Feb 16, 2024 | Team Udayavani |

ಸಿದ್ದಾಪುರ: ಹಾಲಾಡಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಫೆ.15ರಂದು ಶಂಕರನಾರಾಯಣ ಪೊಲೀಸ್‌ ಉಪ ನಿರೀಕ್ಷಕ ನಾಸೀರ್‌ ಹುಸೇನ್‌ ಅವರು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ದಾಳಿಯ ವೇಳೆ ಆರೋಪಿಗಳಾದ ಶಿವರಾಮ, ಉದಯ, ಸುಧೀರ್‌ ಅವರನ್ನು ವಶಕ್ಕೆ ಪಡೆದರು. ನಗದು 1,500 ರೂ., ಕೋಳಿಗಳನ್ನು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next