ಸಿದ್ದಾಪುರ: ಶಂಕರನಾರಾಯಣ ಗ್ರಾಮದ ಕಟ್ಟೆಮಕ್ಕಿ ಎಂಬಲ್ಲಿ ಧರ್ಮಸ್ಥಳದಿಂದ ಕೊಲ್ಲೂರಿಗೆ ಬರುತ್ತಿದ್ದ ಯಾತ್ರಿಕರ ಕಾರಿಗೆ ಎದುರು ಕಡೆಯಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.
Advertisement
ಡಿಕ್ಕಿಯ ಪರಿಣಾಮ ಎರಡು ಕಾರುಗಳು ಜಖಂಗೊಂಡಿವೆ. ಯಾತ್ರಿಕರ ಕಾರಿನಲ್ಲಿದ್ದ ಅಜಯ, ಸೂರ್ಯ, ಮಹೇಂದ್ರ, ಮೂಗಪ್ಪ, ನಾಗರಾಜ ಮತ್ತು ಡಿಕ್ಕಿ ಹೊಡೆದ ಕಾರಿಲ್ಲಿದ್ದವರಿಗೂ ಗಂಭೀರ ಸ್ಪರೂಪದ ಗಾಯಗಳಾಗಿದ್ದು, ವಿವಿಧ ಕಡೆಗಳ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಾರಕಬಾವಿ ಅಜಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.