Advertisement
ಕಂಬಳಕ್ಕೆ ಮೊದಲು ಬರುವ ಕೋಣವನ್ನು ಎದುರು ಕಾಣಿಸುವ ಸಂಪ್ರದಾಯವೂ ಇದೆ. ಕಂಬಳಕ್ಕೆ ಬಂದ ಕೋಣಗಳ ಓಟ ಮುಗಿದ ಅನಂತರ ಕೊನೆಯದಾಗಿ ಮನೆಯ ಕೋಣವನ್ನು ಪುನಃ ಓಡಿಸುವ ಮೂಲಕ ಕೊನೆಗೊಳ್ಳುತ್ತದೆ.
ನಗರದ ಅರಸ ಶಿವಪ್ಪ ನಾಯಕ, ಕಡ್ರಿದೊಡ್ಮನೆ ಕುಟುಂಬಕ್ಕೆ ನಾಯಕ್ ಕುಟುಂಬ ಎಂದು ಬಿರುದು ನೀಡಿ, ಹುಂಬಳಿ ಬಿಟ್ಟಿದ್ದಾನೆ ಎನ್ನುವ ಪ್ರತೀತಿ ಇದೆ. ಶಿವಪ್ಪ ನಾಯಕ ಘಟ್ಟದ ಕೆಳಗೆ ದಂಡೆತ್ತಿ ಬಂದಾಗ ಕಡ್ರಿ ದೊಡ್ಮನೆಯ ಮಹಿಳೆ ತಡೆದು ನಿಲ್ಲಿಸಿದರು. ಮಹಿಳೆಯ ಧೈರ್ಯಕ್ಕೆ ಮೆಚ್ಚಿ, ಕಡ್ರಿದೊಡ್ಮನೆ ಕುಟುಂಬಸ್ಥರಿಗೆ ನಾಯಕ್ ಎಂದು ಬಿರುದು ನೀಡಿದರು. ಅಂದಿನಿಂದ ಕಡ್ರಿದೊಡ್ಮನೆ ಕುಟುಂಬಸ್ಥರು (ಬಂಟ್) ನಾೖಕ್ ಕುಟುಂಬ ಎಂದು ಪ್ರಸಿದ್ಧಿ ಪಡೆಯಿತು.
ಕಡ್ರಿದೊಡ್ಮನೆ ಕಂಬಳವು ಅಳುಪ ಅರಸರ ಕಾಲದಿಂದ ಆಚರಣೆಗೆ ಬಂದಿದೆ ಎನ್ನುವ ಬಗ್ಗೆ ತಾಳೆಗರಿಯಲ್ಲಿ ಉಲ್ಲೇಖ ಇದೆ. ಕಡ್ರಿ ಶಾಸನದಲ್ಲೂ ಇದೆ ಎನ್ನುವ ಮಾತಿದೆ. ಆದರೆ ಕಡ್ರಿ ಕುಟುಂಬಕ್ಕೆ ಯಾವುದೇ ಶಾಸನದ ದಾಖಲೆ ಸಿಕ್ಕಿಲ್ಲ. ಹೊಕ್ಕಾಡಿಗೋಳಿ ಕಂಬಳ ಮುಂದೂಡಿಕೆ
ಬಂಟ್ವಾಳ: ಫೈಂಜಾಲ್ ಚಂಡಮಾರುತದ ಹಿನ್ನೆಲೆಯಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಡಿ. 7ರಂದು ನಡೆಯಬೇಕಿರುವ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳ ಮುಂದೂಡಲಾಗಿದೆ ಎಂದು ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ತಿಳಿಸಿದ್ದಾರೆ.