ಸಿದ್ದಾಪುರ: ರೈತರು ಸಮರ್ಪಣಾಭಾವದಲ್ಲಿ ತೊಡಗಿಸಿ ತಮ್ಮ ಕಾರ್ಯ ಮಾಡುತ್ತಿದ್ದು, ಕೃಷಿಯಿಂದ ನಮ್ಮ ಸಂಸ್ಕೃತಿ, ಬದುಕು, ದೇಶದ ಬೆಳವಣಿಗೆ ಸಾಧ್ಯ. ಆದ್ದರಿಂದ ರೈತರಿಗೆ ಬೆನ್ನೆಲುಬಾಗಿ ನಿಂತು ಮಾಹಿತಿ, ಸೌಲಭ್ಯ ನೀಡಲು ಸರಕಾರ ಕೃಷಿ ಅಭಿಯಾನ ಹಮ್ಮಿಕೊಂಡಿದೆ ಎಂದು ಕೊಪ್ಪಳ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ ಹೇಳಿದರು.
ಮಂಗಳವಾರ ಗ್ರಾಮದ ರೈತ ಸಂಪರ್ಕ ಕೇಂದ್ರದ ವತಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನದಡಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಅಭಿಯಾನದ ಸಮಗ್ರ ಮಾಹಿತಿ ಹೊತ್ತ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಪಾರಂಪರಿಕ ಪದ್ಧತಿಯ ಜತೆಗೆ ಆಧುನಿಕ ಪದ್ಧತಿ ಅಳವಡಿಸಿಕೊಂಡರೆ ಉತ್ತಮ. ಇದಕ್ಕಾಗಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ದೊರೆಯುವ ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಲಾಭ ಪಡೆಯುವಂತೆ ರೈತರಿಗೆ ಸೂಚಿಸಿದರು.
ನಾಡ ತಹಶೀಲ್ದಾರ್ ವಿಶ್ವನಾಥ ಮುರಡಿ, ಗಂಗಾವತಿ ಸಹಾಯಕ ಕೃಷಿ ನಿರ್ದೇಶಕ ಜಂಬಣ್ಣ ಐಲಿ, ಕೃಷಿ ಅಧಿಕಾರಿ ಗೋರಖನಾಥ, ಕಂದಾಯ ನಿರೀಕ್ಷಕ ಮಹೆಬೂಬ್ ಅಲಿ, ಸಹಾಯಕ ಕೃಷಿ ಅಧಿಕಾರಿ ರಾಮಚಂದ್ರಪ್ಪ ಲಮಾಣಿ, ರೈತರಾದ ಮಲ್ಲಿಕಾರ್ಜುನಪ್ಪ ಸಿಂಗನಾಳ, ದೊಡ್ಡನಗೌಡ ಹಳೆಮನಿ, ಜನಗಂಡೆಪ್ಪ ಪೂಜಾರ, ಗಂಗಪ್ಪ ಸುಂಕದ್, ಚನ್ನಬಸಪ್ಪ ಹೊಸಮನಿ, ದೇವರಡ್ಡಿ ಹಳೆಮನಿ, ನಿಲಕಂಠಪ್ಪ, ವಿರುಪಣ್ಣ, ಗಂಗಾಧರ ಹಳೆಮನಿ, ಬಸಪ್ಪ ಮಾಸ್ತರ್, ಸೂರ್ಯಕಾಂತ ಹೊಸಮನಿ, ಸೂರ್ಯಕಾಂತ ವಗ್ಗರ, ಸಣ್ಣ ಚಿನ್ನಪ್ಪ, ಮಾರೆಪ್ಪ ವಿಭೂತಿ, ವೆಂಕಟೇಶ ನಾಯಕ ಸೇರಿದಂತೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳು ಇದ್ದರು.