Advertisement

ಸಿದ್ದಾಪುರ: ಬೆಂಕಿಯಿಂದ ಕಾಡುರಕ್ಷಣೆಗೆ ಬೃಹತ್‌ ಜಾಥಾ

12:30 AM Mar 02, 2019 | Team Udayavani |

ಸಿದ್ದಾಪುರ: ಅರಣ್ಯ ಇಲಾಖೆ ಶಂಕರನಾರಾಯಣ ವಲಯ ಮತ್ತು ವನ್ಯಜೀವಿ ವಲಯ ಸಿದ್ದಾಪುರ ಹಾಗೂ ಸರ್ಕಾರಿ ಪ್ರೌಢಶಾಲೆ ಸಿದ್ದಾಪುರ ಇವರ ಸಹಭಾಗಿತ್ವದಲ್ಲಿ ಸಿದ್ದಾಪುರ ಪೇಟೆಯಲ್ಲಿ ಬೆಂಕಿಯಿಂದ ಕಾಡು ರಕ್ಷಣೆ ಎನ್ನುವ ಕುರಿತು ಸರಕಾರಿ ಶಾಲೆ ಸಿದ್ದಾಪುರ ಇಲ್ಲಿನ ವಿದ್ಯಾರ್ಥಿಗಳಿಂದ ಶುಕ್ರವಾರ ಬೃಹತ್‌ ಜಾಥಾ ನಡೆಯಿತು.

Advertisement

ತಾ.ಪಂ. ಸದಸ್ಯ ವಾಸುದೇವ ಪೈ ಜಾಗಟೆ ಬಾರಿಸಿ ಜಾಥಾಕ್ಕೆ ಚಾಲನೆ ನೀಡಿದರು.ಜಿ.ಪಂ. ಸದಸ್ಯ ರೋಹಿತ್‌ಕುಮಾರ್‌ ಶೆಟ್ಟಿ ಬೀದಿ ನಾಟಕವನ್ನು ಉದ್ಘಾಟಿಸಿದರು. ಬಳಿಕ ಬಸ್‌ ತಂಗುದಾಣದಲ್ಲಿ ಪರಿಸರವನ್ನು ಜೀವಿ ಹಿತರಕ್ಷಣಾ ಸಮಿತಿ ಬನ್ನೇರಘಟ್ಟ ಬೆಂಗಳೂರು ಇವರಿಂದ ಪರಿಸರ ಉಳಿಸಿ ಎಂಬ ಬೀದಿ ನಾಟಕ ನಡೆಯಿತು.

ಗ್ರಾ.ಪಂ. ಉಪಾಧ್ಯಕ್ಷ ಭರತ್‌ ಕಾಮತ್‌, ಕರಪತ್ರವನ್ನು ವಾಚಿಸಿ ಬಿಡುಗಡೆಗೊಳಿಸಿದರು.ಕಾರ್ಯಕ್ರಮ ಉದ್ದೇಶಿಸಿ ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ಎ.ಎ. ಗೋಪಾಲ ಮಾತನಾಡಿ, ಅರಣ್ಯಕ್ಕೆ ಬೆಂಕಿ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು. 

ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ಮಾತನಾಡಿ, ಅರಣ್ಯಕ್ಕೆ ಬೆಂಕಿ ಬಿದ್ದ ಮಾಹಿತಿ ತಿಳಿದಾಕ್ಷಣ ಇಲಾಖೆಗೆ ಮಾಹಿತಿ ನೀಡಿ. ಬೆಂಕಿ ನಂದಿಸಲು ಸಹಕರಿಸಿ ಎಂದವರು ತಿಳಿಸಿದರು.  

ಉಳ್ಳೂರು 74 ಗ್ರಾಮ ಅರಣ್ಯ ಸಮಿತಿಯ ಕಾರ್ಯನಿರ್ವಹಣಾ ಸದಸ್ಯ ಚಿಟ್ಟೆ ರಾಜ್‌ ಗೋಪಾಲ ಹೆಗ್ಡೆ ಪರಿಸರ ರಕ್ಷಣೆ ಬಗ್ಗೆ ಮಾತನಾಡಿದರು. 

Advertisement

ಈ ಸಂದರ್ಭದಲ್ಲಿ ಜಾಥಾದ ಉಸ್ತುವಾರಿಯನ್ನು ಸಿದ್ದಾಪುರ ವನ್ಯಜೀವಿ ವಿಭಾಗದ ಭಗವಾನ್‌ ದಾಸ್‌, ಶಂಕರನಾರಾಯಣ ಉಪ ವಲಯ ಅರಣ್ಯಾಧಿಕಾರಿ ಹರೀಶ ಕೆ., ಸಿದ್ಧಾಪುರ ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಎಸ್‌., ಅಮಾಸೆಬೈಲು ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ವೀರಣ್ಣ ಮಾಯಾಚಾರಿ, ಹಾಲಾಡಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ರಾಕೇಶ, ಮೊಳಹಳ್ಳಿ ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಸಂತೋಷ ದೇವಾಡಿಗ, ಸಿದ್ಧಾಪುರ ವನ್ಯಜೀವಿ ವಿಭಾಗದ ಉಪ ವಲಯರಾಣ್ಯಾಧಿಕಾರಿ ಪೂರ್ಣಾನಂದ, ಶಂಕರನಾರಾಯಣ ವಿಭಾಗದ ಅರಣ್ಯ ರಕ್ಷಕ ಗುರುರಾಜ, ಶಿರಿಯಾರ ವಿಭಾಗದ ಅರಣ್ಯ ರಕ್ಷಕ ರವೀಂದ್ರ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next