Advertisement

Siddapur: ಡೆಂಘಿಗೆ 6ನೇ ತರಗತಿ ವಿದ್ಯಾರ್ಥಿನಿ ಬಲಿ

01:17 PM Sep 05, 2024 | Team Udayavani |

ಸಿದ್ದಾಪುರ: ಡೆಂಘಿ ಜ್ವರಕ್ಕೆ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬಲಿಯಾದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಎಂಬಲ್ಲಿ ಸೆ.5ರ  ಗುರುವಾರ ನಡೆದಿದೆ.

Advertisement

ಸಿದ್ದಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಫೀಯಾ ಡೆಂಘಿಗೆ ಬಲಿಯಾದ ವಿದ್ಯಾರ್ಥಿನಿ.

ಸುಫೀಯಾಳಿಗೆ ಸೆ.2ರ ಸೋಮವಾರ ಜ್ವರ ಕಾಣಿಸಿಕೊಂಡ ಹಿನ್ನಲೆ ಗ್ರಾಮದ ಖಾಸಗಿ ಕ್ಲಿನಕ್ ವೊಂದರಲ್ಲಿ ಚಿಕಿತ್ಸೆ ಪಡೆದಿದ್ದಳು. ಆದರೂ, ಸಹ ಜ್ವರ ಕಡಿಮೆಯಾಗಿರಲಿಲ್ಲ. ಹೀಗಾಗಿ ಸಿಂಧನೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಲ್ಲಿಯೂ ಸಹ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮಂಗಳವಾರ ಬಳ್ಳಾರಿ ಜಿಲ್ಲೆಯ ಆಸ್ಪತ್ರೆವೊಂದರಲ್ಲಿ ದಾಖಲು ಮಾಡಲಾಗಿತ್ತು.

ಆದರೂ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ನಿಧನ ಹೊಂದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next