Advertisement

ಚಿಂತಕರ ಬದಲಿಗೆ ಹಂತಕರ ಪಡೆ ಸೃಷ್ಟಿಸುತ್ತಿರುವ ಬಿಜೆಪಿ: ಡಾ.ಸಿದ್ದಣ್ಣಗೌಡ ಪಾಟೀಲ ಆರೋಪ

09:49 AM Mar 03, 2020 | Team Udayavani |

ಕಲಬುರಗಿ: ನಮ್ಮ ನಾಡಿಗೆ ಬೇಕಾಗಿರುವುದು ಚಿಂತಕರ ಪಡೆ. ಆದರೆ ಮೂಲ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿ ಹಂತಕರ ಪಡೆಯನ್ನು ಸೃಷ್ಟಿಸುತ್ತಿದೆ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಸಿದ್ದಣ್ಣಗೌಡ ಪಾಟೀಲ ದೂರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಂತಹವರನ್ನು ಮುಂದೆ ಬಿಟ್ಟು, ಅಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿಸಲಾಗುತ್ತಿದೆ. ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಈಶ್ವರಪ್ಪನಂತಹ ಹಿರಿಯ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದು ಹಿಟ್ಲರ್ ಮಾದರಿಯ ಪ್ರಚಾರ ತಂತ್ರ ಎಂದು ಟೀಕಿಸಿದರು.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧದ ಯತ್ನಾಳ್ ಹೇಳಿಕೆಗಳು ಸಹ ಉದ್ದೇಶ ಪೂರ್ವಕವಾಗಿ ಕೂಡಿವೆ. ಗೋಲಿ‌ ಮಾರೋ ಹೇಳಿಕೆ ಸಹ ಬಿಜೆಪಿಯಿಂದಲೇ ಬಂದಂತದ್ದು. ಪ್ರಧಾನಿ ಮೋದಿ, ಬಿಜೆಪಿ ಪಕ್ಷವನ್ನು ಪ್ರಶ್ನೆ ಮಾಡಬಾರದು ಮನೋಭಾವ ಬಿತ್ತಲಾಗುತ್ತದೆ. ಪ್ರಶ್ನೆ ಮಾಡಿದರೆ ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಪಾಕಿಸ್ತಾನದ ಭಜನಾ ಮಂಡಳಿಯಾಗಿದೆ. ದೇಶದ ಆರ್ಥಿಕತೆ ಕುಸಿತ, ರೈತರ ಸಮಸ್ಯೆ ಹಾಗೂ ಬ್ಯಾಂಕ್ ಗಳ ದಿವಾಳಿತನಂತಹ ವಾಸ್ತವ ಅಂಶಗಳನ್ನು ಮರೆಮಾಚಲು ನಿರ್ಧಿಷ್ಟ ಜನಾಂಗವನ್ನು ಎತ್ತಿಕಟ್ಟುವ ವ್ಯವಸ್ಥಿತವಾದ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next