Advertisement

ಸಿದ್ದಕಟ್ಟೆ: ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರ

11:06 AM May 10, 2019 | Team Udayavani |

ಪುಂಜಾಲಕಟ್ಟೆ ಮೇ 9: ಅಳಿವಿನಂಚಿ ನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ, ಗುಬ್ಬಚ್ಚಿ ಗೂಡು ಜಾಗೃತಿ ಕಾರ್ಯಾಗಾರ ಅಂಗವಾಗಿ ಸಿದ್ದಕಟ್ಟೆ ಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

Advertisement

ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರದ ಸಂಚಾಲಕಿ ರಮ್ಯಾ ನಿತ್ಯಾನಂದ ಶೆಟ್ಟಿ ಅವರು ಸಿದ್ದಕಟ್ಟೆ ಬ್ರಹ್ಮಶ್ರೀ ಪ್ರಾವಿಜನ್‌ ಸ್ಟೋರ್‌ನ ಮಾಲಕ ದಾಮೋದರ್‌ ಅವರಿಗೆ ಪಕ್ಷಿಗಳಿಗೆ ಆಹಾರ ಇಡುವ ಮಣ್ಣಿನ ಪಾತ್ರೆಯನ್ನು ನೀಡಿದರು.

ಕಾರ್ಯಾಗಾರದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ಅವರು ಪಕ್ಷಿಗಳಿಗೆ ನೀರು ಮತ್ತು ಆಹಾರ ಇಡುವ ವಿಧಾನವನ್ನು ವಿವರಿಸಿ, ಆಹಾರ-ನೀರನ್ನು ಅರಸಿಕೊಂಡು ಬರುವ ಪಕ್ಷಿಗಳಿಗೆ ನಾವೆಲ್ಲರೂ ಆಶ್ರಯವನ್ನು ಒದಗಿಸಬೇಕು. ಬಿರು ಬೇಸಗೆಗೆ ಪಕ್ಷಿಗಳು ನೀರನ್ನು ಅರಸಿ ತಂಪಾದ ವಾತಾವರಣವನ್ನು ಹುಡುಕಿಕೊಂಡು ವಲಸೆ ಹೋಗಲು ಬಯಸಿ ಅವಘಡಕ್ಕೆ ಒಳಗಾಗುವುದನ್ನು ತಪ್ಪಿಸಲು ಮನೆಗಳಲ್ಲಿ ಪಕ್ಷಿಗಳಿಗೆ ನೀರು ಇಡಿ, ಗಿಡ ನೆಡಿ, ನೀರನ್ನು ಹಿತಮಿತವಾಗಿ ಬಳಕೆ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಗಡಿ ಮಾಲಕ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next