Advertisement

ವೃತ್ತಕ್ಕೆ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಹೆಸರಿಡಲು ಒತ್ತಾಯ

03:21 PM Dec 14, 2019 | Team Udayavani |

ಗೌರಿಬಿದನೂರು: ನಗರದ ಬೆಂಗಳೂರು ರಸ್ತೆಯ ನಿರ್ಮಾಣ ಹಂತದಲ್ಲಿರುವ ವರ್ತುಲ ರಸ್ತೆಯ ವೃತ್ತಕ್ಕೆ ತ್ರಿವಿಧ ದಾಸೋಹಿ, ಸಿದ್ಧಗಂಗಾದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಬೇಕು ಎಂದು ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಕ್ಷೇತ್ರದ ಶಾಸಕರನ್ನು ಒತಾಯಿಸಿದೆ.

Advertisement

ಗೌರಿಬಿದನೂರು ನಗರಕ್ಕೂ ಸಿದ್ಧಗಂಗಾ ಶ್ರೀಗಳಿಗೂ ಹೆಚ್ಚಿನ ಸಂಬಂಧವಿದೆ. ನಡೆದಾಡುವ ದೇವರು ಎಂದೇ ಬಿಂಬಿತವಾಗಿದ್ದ ಶ್ರೀಗಳ ಪುತ್ಥಳಿಯನ್ನು ವರ್ತುಲ ರಸ್ತೆಯ ವೃತ್ತಕ್ಕೆ ಸ್ಥಾಪಿಸುವ ಮೂಲಕ ಉತ್ತಮ ಸಂದೇಶ ಸಾರಿದಂತಾಗುತ್ತದೆ. ಈ ಬಗ್ಗೆ ಶಾಸಕರ ಬಳಿಗೆ ವೀರಶೈವ ಮಹಾಸಭಾ ವೇದಿಕೆಯ ತಾಲೂಕು ಘಟಕ ನಿಯೋಗವು ತೆರಳುತ್ತಿರುವುದಾಗಿ ವೇದಿಕೆಯ ರಾಜ್ಯ ಘಟಕದ ಯುವ ಕಾರ್ಯದರ್ಶಿ ಎನ್‌ .ವಿ.ಗೌರೀಶ್‌, ನಿರ್ದೇಶಕ ಟಿ.ಜಿ.ಗಂಗಾಧರಯ್ಯ, ತಾಲೂಕು ಅಧ್ಯಕ್ಷ ಬಿ.ಎಂ.ನಟರಾಜ್‌, ಉಪಾಧ್ಯಕ್ಷರಾದ ದೇವಿ ಮಂಜುನಾಥ್‌, ರುದ್ರಮ್ಮ, ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಕುಮಾರ್‌, ಖಜಾಂಚಿ ಜಿ.ರಾಜಣ್ಣ, ಕಾರ್ಯದರ್ಶಿ ಹಳೇಹಳ್ಳಿಶಿವಕುಮಾರ್‌, ನಿರ್ದೇಶಕರಾದ ಯತೀಶ್‌, ನಾಗರಾಜು, ರೂಪಾ, ಗೌರಮ್ಮ, ದೀಪಾ, ಲತಾ, ಶಶಿಕಲಾ, ಪ್ರಸನ್ನ, ಕೌಶಿಕ್‌, ಗಂಗಾಧರ್‌, ಕಾದಲವೇಣಿ ಶಿವಕುಮಾರ್‌, ಮುಖಂಡರಾದ ಎನ್‌.ಆರ್‌.ರವಿ, ಎಂ. ಹರೀಶ್‌, ಎಚ್‌.ನಂಜುಂಡಪ್ಪ, ಮಲ್ಲೇಶ್ವರಯ್ಯ, ಹುದುಗೂರು ಚಂದ್ರಣ್ಣ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next