Advertisement

ಕ್ರಿಯಾಸಮಾಧಿ ಸ್ಥಳ ನಿರ್ಮಾಣದ ಹಿಂದೆ ಐತಿಹ್ಯ

01:00 AM Jan 23, 2019 | |

ಶ್ರೀಶಿವಕುಮಾರ ಸ್ವಾಮೀಜಿಗಳ ಕ್ರಿಯಾಸಮಾಧಿ ಸ್ಥಳ ನಿರ್ಮಾಣದ ಹಿಂದೆ ಐತಿಹ್ಯವಿದೆ. ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರಸ್ವಾಮಿಗಳು, ನನ್ನ ಅಂತ್ಯ ಕ್ರಿಯಾಧಿಗಳನ್ನು ತಮ್ಮ ಗುರು ಗಳಾದ ಅಟವಿ ಶ್ರೀ ಉದ್ಧಾನ ಶಿವಯೋಗಿ ಗಳ ಕ್ರಿಯಾಸಮಾಧಿ ಪಕ್ಕದಲ್ಲಿಯೇ ಆಗಬೇಕು ಎನ್ನುವ ಇಚ್ಛೆಯನ್ನು ದಶಕಗಳ ಹಿಂದೆಯೇ ವ್ಯಕ್ತಪಡಿಸಿದ್ದರು.

Advertisement

ಆದರೆ, ಆ ಜಾಗದಲ್ಲಿ ದೊಡ್ಡ ಆಲದಮರ ಬೆಳೆದು ನಿಂತಿತ್ತು. ಆದರೆ ಹಲವಾರು ವರ್ಷಗಳಿಂದ ಜನರಿಗೆ ನೆರಳು ನೀಡಿದ ಮರವನ್ನು ತೆಗೆಯುವುದು ಬೇಡ ಎಂದು ಶ್ರೀಗಳು ಕಿರಿಯ ಶ್ರೀಗಳಿಗೆ ತಿಳಿಸಿದ್ದರು. ಆದರೆ, ಶ್ರೀಗಳ ಬಯಕೆಯನ್ನು ದೇವರು ಆಲಿಸಿದಂತೆ ಕೆಲವೇ ದಿನಗಳಲ್ಲಿ ಪವಾಡವೊಂದು ನಡೆದುಹೋಗಿತ್ತು. ಭಾರೀ ಮಳೆ ಗಾಳಿಗೆ ಆಲದ ಮರ ನೆಲಕ್ಕುರಳಿತ್ತು. ಈ ಘಟನೆ ಕಂಡು ಶ್ರೀಗಳು ದೇವರ ಇಚ್ಛೆ ಎಂದಿದ್ದರು.

ಕಡೆಗೆ ಗುರುವಿನ ಸನಿಹದಲ್ಲಿಯೇ ಸೇರುವ ಶ್ರೀಗಳ ಬಯಕೆಯಂತೆ ಆ ಜಾಗವನ್ನು ಸ್ವಚ್ಛಗೊಳಿಸಿ ಶ್ರೀಗಳ ಕ್ರಿಯಾಸಮಾಧಿಗಾಗಿ ಶಿವಯೋಗಿ ಮಂದಿರವನ್ನು ಮೊದಲೇ ನಿರ್ಮಾಣ ಮಾಡಿದ್ದರು. ಗುರುಗಳ ಅಂತ್ಯ ಪೂಜಾವಿಧಿ ವಿಧಾನಗಳಿಗೆ ಅನುಕೂಲವಾಗುವಂತೆ ಈ ಮಂದಿರ ನಿರ್ಮಿಸಿರುವುದು ವಿಶೇಷ.

ಶ್ರೀಗಳ ಕ್ರಿಯಾಸಮಾಧಿಯ ಗದ್ದುಗೆ ಸಂಪೂರ್ಣ ಅಮೃತಶಿಲೆಯಲ್ಲಿ ನಿರ್ಮಾಣಗೊಂಡಿದೆ. ಒಂಭತ್ತು ಪಾದ ಉದ್ದ, ಐದು ಪಾದ ಅಗಲವಿದ್ದು, ತ್ರಿಕೋನಾಕೃತಿಯ ಗೂಡು ನಿರ್ಮಿಸಲಾಗಿದೆ. 108 ಮಂತ್ರಬೀಜಾಕ್ಷರ ಬರೆಯಲಾಗಿದೆ. ಇದೇ ಗೂಡಿನಲ್ಲಿ ಶ್ರೀಗಳ ಕಾಯನ್ನಿಡಲಾಗಿದೆ. ಮುಂದಿನ ದಿನಗಳಲ್ಲಿ ಗದ್ದುಗೆ ಮೇಲೆ ಲಿಂಗವನ್ನಿಟ್ಟು ಪೂಜಾ ಕೈಂಕರ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next