Advertisement
ಕ್ರಿಯಾ ಸಮಾಧಿಯಲ್ಲಿ ಮಾಡಲಾಗಿದ್ದ ಮೂರು ಸೋಪಾನ (ಮೂರು ಮೆಟ್ಟಿಲು)ಗಳಲ್ಲಿ ಯೂ ಶ್ರೀಗಳ ಲಿಂಗ ಶರೀರವನಿಟ್ಟು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಪಂಚಫಲ ಅಭಿಷೇಕ, ರುದ್ರಾಭಿಷೇಕದ ಮೂಲಕ ಶ್ರೀಗಳ ಲಿಂಗಕಾಯದ ಶುದ್ಧಿ ಸೇರಿ ಇನ್ನಿತರೆ ಧಾರ್ಮಿಕ ವಿಧಿವಿಧಾನ ನೆರವೇರಿತು. ಅಲ್ಲದೇ ಸಿದಟಛಿಗಂಗಾ ಬೆಟ್ಟದ ಮೇಲಿನಿಂದ ತರಲಾಗಿದ್ದ ನೀರಿನಿಂದ ಶುದಿಟಛೀಕರಣ ಕಾರ್ಯ ನೆರವೇರಿಸಲಾಯಿತು. ಕ್ರಿಯಾ ಸಮಾಧಿಯೊಳಗಿನ ಗೂಡಿನಲ್ಲಿ ಶ್ರೀಗಳ ಲಿಂಗಶರೀರವನ್ನು ಪದ್ಮಾಸನದಲ್ಲಿ ಪ್ರತಿಷ್ಠಾಪಿಸಿದ ಸ್ವಾಮೀಜಿಗಳು ವಚನ ಮಂಗಳಾರತಿ ಹಾಡಿ, ಇಷ್ಟ ಲಿಂಗವನ್ನು ಕಾಯದ ಜತೆಗಿಟ್ಟು ಓಂ ನಮಃ ಶಿವಾಯ ಬರೆದ 108 ಬೀಜಾಕ್ಷರ ಯಂತ್ರಗಳನ್ನು ಅಂಟಿಸಿದರು.
Related Articles
Advertisement
ಶಿವಕುಮಾರ ಸ್ವಾಮೀಜಿಗಳ ಕ್ರಿಯಾಸಮಾಧಿಗೂ ಮುನ್ನ ಸಿದಟಛಿಪಡಿಸಲಾಗಿದ್ದ ಗೂಡಿನಲ್ಲಿ ಗಣಪತಿ ಪೂಜೆ, ಪಂಚಕಳಸ ಸ್ಥಾಪನೆ ಅಷ್ಟ ದಿಕಾ³ಲಕರು ಹಾಗೂ ನವಗ್ರಹಗಳ ಪೂಜೆ ನೆರವೇರಿಸಲಾಯಿತು. ಶಿವನ ಪಂಚಮುಖಗಳ ಸಂಕೇತವಾಗಿ ಐದು ಕಳಶ, ವರ್ಣ ಹಾಗೂ ವಾಸ್ತು ದೇವತೆಗಳ ಎರಡು ಕಳಶ, ನಾಂದಿ ಕಳಶ ಸ್ಥಾಪಿಸಿ ಏಕೋವಿಂಶತಿ ಮಹೇಶ್ವರರ ಪೂಜೆ ಮಾಡಲಾಯಿತು.
ಸರ್ಕಾರಿ ಗೌರವ ಸುಮಾರು 400 ಮೀಟರ್ ದೂರದವರೆಗೂ ರಥಯಾತ್ರೆ ನಂತರ ಕ್ರಿಯಾ ಸಮಾಧಿ ಸ್ಥಳದ ಮುಂಭಾಗದಲ್ಲಿ ಶ್ರೀಗಳನ್ನು ಕುಳ್ಳಿರಿಸಿ ಶ್ರೀಗಳ ಲಿಂಗಕಾಯಕ್ಕೆ ರಾಷ್ಟ್ರಧ್ವಜ ಹೊದಿಸಿ , ಕುಶಾಲತೋಪು ಹಾರಿಸಿ ಸರ್ಕಾರದ ಗೌರವ ವಂದನೆ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್‌ನೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಡಿ.ವಿ.ಸದಾನಂದಗೌಡ, ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ, ಗೃಹ ಸಚಿವ ಎಂ.ಬಿ ಪಾಟೀಲ,ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದ ರಾಮಯ್ಯ, ಬಿ.ಎಸ್.ಯಡಿಯೂರಪ್ಪ, ವೀರಪ್ಪ ಮೊಯಿಲಿ ಮತ್ತಿತರರು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.
ರಾಷ್ಟ್ರಧ್ವಜ ಹಸ್ತಾಂತರಬಳಿಕ ಮಠದ ವತಿಯಿಂದ ಶ್ರೀಗಳ ಲಿಂಗ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ, ಕಿರಿಯ ಶ್ರೀಗಳಾದ ಸಿದಟಛಿಲಿಂಗ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು. ರಾಷ್ಟ್ರಧ್ವಜ ಸ್ವೀಕರಿಸಿ ಕಣ್ಣಿಗೊತ್ತಿಕೊಂಡ ಶ್ರೀಗಳು ಭಾವುಕರಾದರು. ಕಿರಿಯ ಶ್ರೀ ಗಳಿಂದ ಇಷ್ಟಲಿಂಗ ಪೂಜೆ
ಶ್ರೀ ಕ್ಷೇತ್ರ ಸಿದ್ಧಲಿಂಗ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರ ಅನುಪಸ್ಥಿತಿಯಲ್ಲಿ ಮಂಗಳವಾರ ಸಿದಟಛಿಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳು ಹಳೇ ಮಠದಲ್ಲಿ ಇಷ್ಟಲಿಂಗ ಪೂಜೆಯನ್ನು ಧಾರ್ಮಿಕ ವಿಧಿ ವಿಧಾನಗಳಂತೆ ನೆರವೇರಿಸಿದರು. ನಂತರ ಸಾಮೂಹಿಕ ಪಾರ್ಥನೆ ಮಾಡಿದರು. ಹಿರಿಯ ಶ್ರೀಗಳು ಶಿವೈಕ್ಯರಾಗಿರುವುದಕ್ಕೆ ಮಠದ ವಿದ್ಯಾರ್ಥಿಗಳು ಮತ್ತು ಶ್ರೀಗಳು ಈ ವೇಳೆ ಭಾವುಕರಾದರು. ಇಷ್ಟಲಿಂಗ ಪೂಜೆ ನಂತರ ಸಿದ್ದಲಿಂಗ ಸ್ವಾಮೀಜಿಯವರು ಭಕ್ತರಿಗಾಗಿ ವಿವಿಧ ಭಾಗದಲ್ಲಿ ಏರ್ಪಡಿಸಿದ್ದ ದಾಸೋಹ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಷ್ಟಲಿಂಗ ಪೂಜೆ ಹಾಗೂ ಪರಿಶೀಲನೆ ಹೊರತುಪಡಿಸಿ ಉಳಿದ ಸಮಯದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರ ಲಿಂಗಕಾಯದ ಸಮೀಪವೇ ಸಿದ್ಧಲಿಂಗ ಸ್ವಾಮೀಜಿಯವರು ಕುಳಿತಿದ್ದರು. ರುದ್ರಾಕ್ಷಿ ರಥದಲ್ಲಿ ಭವ್ಯ ಮೆರವಣಿಗೆ
ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಇಪ್ಪತ್ತೂಂದನೇ ಶತಮಾನ ಕಂಡ ಸಂತ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗಕಾಯದ ಸಾರ್ವಜನಿಕ ಅಂತಿಮ ದರ್ಶನ ಪೂರ್ಣಗೊಂಡ ಬಳಿಕ ಸಂಜೆ 5 ಗಂಟೆಗೆ ಶ್ರೀಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗಸ್ವಾಮೀಜಿ ಹಿರಿಯ ಶ್ರೀಗಳ ಲಿಂಗಕಾಯಕ್ಕೆ ಪೂಜೆ ಸಲ್ಲಿಸಿ ಮಂಗಳಾರತಿ ನಡೆಸಿದರು. ಶ್ರೀಗಳ ಲಿಂಗಶರೀರವನ್ನು 15 ಅಡಿ ಎತ್ತರದ ವಿವಿಧ ಪುಷ್ಪಾಲಂಕೃತ ರುದ್ರಾಕ್ಷಿ ರಥದಲ್ಲಿ ಇರಿಸಿದ ಬಳಿಕ ಕ್ರಿಯಾ ಸಮಾಧಿ ಸ್ಥಳಕ್ಕೆ ಮೆರವಣಿಗೆ ಹೊರಟಾಗ ಭಕ್ತಸಮೂಹ ದಿಂದ ಓಂ ನಮಃ ಶಿವಾಯ, ತ್ರಿವಿಧ ದಾಸೋಹಿ ಅಮರ, ನಡೆದಾಡುವ ದೇವರಿಗೆ ಜಯವಾಗಲಿ ಎಂಬ ಘೋಷಣೆ ಮೊಳಗಿತು. ರುದ್ರಾಕ್ಷಿ ರಥದಲ್ಲಿ ಸಂತ ಶಿವಕುಮಾರ ಸ್ವಾಮೀಜಿ ನಿರ್ಲಿಪ್ತತೆಯಿಂದ ಆಸೀನರಾಗಿದ್ದರೆ, ರಥದ ಮುಂಭಾಗ ಕಿರಿಯ ಶ್ರೀಗಳು ಸೇರಿ ಹಲವು ಸ್ವಾಮೀಜಿಗಳು ಆಸೀನರಾಗಿದ್ದರು. ಮಠದ ವಿದ್ಯಾರ್ಥಿಗಳಿಂದ ನಂದಿಧ್ವಜ ಸ್ತಂಭ ಕುಣಿತ, ಬ್ಯಾಂಡ್, ವೀರಗಾಸೆ, ಜಾನಪದ ವಾದ್ಯಗಳೊಂದಿಗೆ ಹೊರಟ ಮೆರವಣಿಗೆಯುದ್ದಕ್ಕೂ ಓಂನಮ: ಶಿವಾಯ.. ಸ್ತೋತ್ರ ಅನುರಣಿಸುತ್ತಿತ್ತು. ರಸ್ತೆಯ ಇಕ್ಕೆಲಗಳು, ಮಠದ ಮೇಲ್ಮಹಡಿ, ಮರಗಳ ಕೊಂಬೆಗಳ ಮೇಲೆಯೂ ಕುಳಿತ ಸಹಸ್ರ ಸಹಸ್ರ ಭಕ್ತ ಸಮೂಹ “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’.. ಎಂದು ಕಣ್ಣೀರಿಟ್ಟರು. ದೂರದಿಂದಲೇ ಸ್ವಾಮೀಜಿಯನ್ನು ಕಣ್ತುಂಬಿಕೊಂಡು ಪಾವನರಾದರು. 12 ಲಕ್ಷ ಭಕ್ತರ ಆಗಮನ
ರಾಜ್ಯದ ವಿವಿಧ ಭಾಗಗಳಿಂದ 12 ಲಕ್ಷಕ್ಕೂ ಅಧಿಕ ಭಕ್ತರು ಸೋಮವಾರ ಮತ್ತು ಮಂಗಳವಾರ ಸಿದ್ಧಗಂಗಾ ಶ್ರೀಗಳ ಲಿಂಗಶರೀರದ ಅಂತಿಮ ದರ್ಶನ ಪಡೆದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಬಸ್,ರೈಲು ಹಾಗೂ ಸ್ವಂತ ವಾಹನಗಳಲ್ಲಿ ಭಕ್ತರು ಸಿದ್ಧಗಂಗಾ ಕ್ಷೇತ್ರಕ್ಕೆ ಬಂದಿದ್ದರು. ಸೋಮವಾರ ಮಧ್ಯಾಹ್ನದಿಂದ ಸಿದಟಛಿಗಂಗಾ ಮಠಕ್ಕೆ ಆಗಮಿಸುತ್ತಿದ್ದ ಭಕ್ತರ ದಂಡು ಮಂಗಳವಾರ ಸಂಜೆಯವರೆಗೂ ನಿರಂತರವಾಗಿ ಸಾಗಿ ಬಂದಿತ್ತು. ಹೂವಿನ ಅಲಂಕಾರ ಶ್ರೀಗಳ ಲಿಂಗಕಾಯದ ಕ್ರಿಯಾ ಸಮಾಧಿಗಾಗಿ ನಿರ್ಮಿಸಿದ್ದ ಶಿವಯೋಗಿ ಮಂದಿರವನ್ನುವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಮಹಾದ್ವಾರದ ಮುಂಭಾಗದಲ್ಲಿ ಹೂವಿನಿಂದ
ಶಿವಲಿಂಗ ಪ್ರತಿಕೃತಿ ನಿರ್ಮಿಸಲಾಗಿತ್ತು. ಮುಂಭಾಗದಲ್ಲಿ ಹೂವಿನಿಂದಲೇ ಓಂ ನಮಃ ಶಿವಾಯ ಎಂದು ಬರೆಯಲಾಗಿತ್ತು. ಜತೆಗೆ ಮಠದ ವಿದ್ಯಾರ್ಥಿಗಳು ನೀರಿನಿಂದ ಶುದ್ಧೀಕರಿಸಿ, ರಂಗೋಲಿ ಹಾಕಿದ್ದರು. ಮಂದಿರ ಒಳಭಾಗದಲ್ಲಿ ಲಿಂಗಕಾಯ ಇರಿಸಲು ನಿರ್ಮಿಸಿದ್ದ ಗದ್ದುಗೆಯ ಗೂಡು ಹಾಗೂ ಗೋಡೆಗೆ ವಿಭೂತಿ ಬರೆದು ಹೂಗಳಿಂದ ಶೃಂಗರಿಸಿದ್ದರು. ವೀರಾಪುರ ದತ್ತು :ಡಿಕೆಶಿ ಬೆಂಗಳೂರು: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಳ್ಳುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರ ಅಂತಿಮ ಕ್ರಿಯಾ ವಿಧಿಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಂಡು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.