ತುಮಕೂರು: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ವೈದ್ಯ ಲೋಕವೇ ಅಚ್ಚರಿ ಪಡುವ ರೀತಿಯಲ್ಲಿ ಶುಕ್ರವಾರ ಚೇತರಿಕೆ ಕಂಡು ಬಂದಿದೆ. ಸಿದ್ದಗಂಗಾ ಮಠದ ಹಳೇ ಮಠದಲ್ಲಿ ಶ್ರೀಗಳಿಗೆ ಶುಕ್ರವಾರ ಚೆನ್ನೈನ ರೇಲಾ ಆಸ್ಪತ್ರೆ ವೈದ್ಯರಾದ ಡಾ.ಮಹಮದ್ ರೇಲಾ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಗುರುವಾರ ಬೆಳಗ್ಗೆ ಶ್ರೀಗಳ ಆರೋಗ್ಯದಲ್ಲಿ ಗಂಭೀರತೆ ಇತ್ತು. ಆದರೆ, ಸಂಜೆ ವೇಳೆಗೆ ಯಂತ್ರದ ಸಹಾಯವಿಲ್ಲದೆ ಸ್ವಯಂ ಉಸಿರಾಟ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಶುಕ್ರವಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದರಿಂದ ವೈದ್ಯರು ಸಂತಸಗೊಂಡಿದ್ದಾರೆ. ಗುರುವಾರ ಶ್ರೀಗಳ ಶರೀರದಲ್ಲಿ ಪ್ರೋಟಿನ್ ಅಂಶ ಉತ್ಪತ್ತಿಯಾಗಿರಲಿಲ್ಲ. ಆದರೆ, ಶುಕ್ರವಾರ ಶರೀರದಲ್ಲಿ ಪ್ರೋಟಿನ್ ಅಂಶವೂ ಉತ್ಪತ್ತಿ ಯಾಗುತ್ತಿದೆ. ಇದನ್ನು ಗಮನಿಸಿದರೆ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗುವ ನಿರೀಕ್ಷೆಯಲ್ಲಿ ವೈದ್ಯರು ಹಾಗೂ ಭಕ್ತ ಸಮೂಹವಿದೆ.
ಅಮೆರಿಕಾ ವೈದ್ಯರಿಂದಲೂ ಚಿಕಿತ್ಸೆ:ಅಮೆರಿಕಾದಲ್ಲಿ ವೈದ್ಯರಾಗಿರುವ ಸಿದಟಛಿಗಂಗಾ ಮಠದ ಹಳೇ ವಿದ್ಯಾರ್ಥಿ ಡಾ. ನಾಗಣ್ಣ ಅವರು ಶ್ರೀಗಳಿಗೆ ಚಿಕಿತ್ಸೆ ನೀಡಲು ರಜೆ ಹಾಕಿ ಬಂದಿದ್ದು, ಅವರು ಶ್ರೀಗಳ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾ ರೆ.
ಸಿದ್ದಲಿಂಗೇಶ್ವರ ಸ್ವಾಮಿಗೆ ಪೂಜೆ: ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಶುಕ್ರವಾರ ಶ್ರೀ ಕ್ಷೇತ್ರದ ಆರಾಧ್ಯ ದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು. ಪೂಜೆ ನಂತರ ಕಿರಿಯ ಶ್ರೀಗಳು, ಹಿರಿಯ ಶ್ರೀಗಳು ಚಿಕಿತ್ಸೆ ಪಡೆಯುತ್ತಿರುವ ಕೊಠಡಿಗೆ ತೆರಳಿ ಹಣೆಗೆ ವಿಭೂತಿ ಧರಿಸಿದರು. ಅಲ್ಲಿಯೇ ಇಷ್ಟಲಿಂಗ ಪೂಜೆ ನೆರವೇರಿಸುವಾಗ ಹೇಳುತ್ತಿದ್ದ ದೇವರ ಮಂತ್ರಕ್ಕೆ ಶ್ರೀಗಳ ದೇಹದಲ್ಲಿ ಬದಲಾವಣೆಯಾಗುತ್ತಿತ್ತು ಎನ್ನುತ್ತಾರೆ ವೈದ್ಯ ಡಾ.ಪರಮೇಶ್. ವದಂತಿ ಹಬ್ಬಿಸಬೇಡಿ: “ಶ್ರೀಗಳ ಆರೋಗ್ಯ ಚೇತರಿಕೆಯಾಗಿದೆ. ಸ್ವಯಂ ಉಸಿರಾಟ ಮಾಡುತ್ತಿದ್ದಾರೆ. ಭಕ್ತರಿಗೆ ಗೊಂದಲ ಉಂಟಾಗುವಂತೆ ವದಂತಿ ಹಬ್ಬಿಸಬೇಡಿ’ ಎಂದು ಕಿರಿಯ ಶ್ರೀಗಳು ವಿನಂತಿ ಮಾಡಿದರು.
ಈವರೆಗೂ ಉತ್ತರಾಯಣಕ್ಕೆ ಕಾಯುತ್ತಿದ್ದಾ ರೆ. ನಂತರ ನಿಜ ಸಂಗತಿ ಘೋಷಿಸುತ್ತಾರೆ ಎಂದೆಲ್ಲ ಇಲ್ಲಸಲ್ಲದ ಸಂಗತಿ ಹಬ್ಬಿಸುತ್ತಿದ್ದಾರೆ. ನಮಗೆ ಯಾವ ಉತ್ತರಾಯಣವೂ ಇಲ್ಲ. ದಕ್ಷಿಣಾಯನವೂ ಇಲ್ಲ. ನಮಗೆಲ್ಲಾ ಒಂದೇ. ನಮಗೆ ಬೇಕಾಗಿರುವುದು ಶ್ರೀಗಳು ಶೀಘ್ರ ಆರೋಗ್ಯವಂತರಾಗಲಿ ಎಂಬುದು. ವಿನಾಕಾರಣ ಇಲ್ಲಸಲ್ಲದ ವದಂತಿಗಳನ್ನು ಯಾರೂ ಹಬ್ಬಿಸಬಾರದು ಎಂದು ಮನವಿ ಮಾಡಿದರು.
ಭಾರತ ರತ್ನಕ್ಕೆ ಸಿಎಂ ಮನವಿ
ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಮಾತನಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಶ್ರೀಗಳಿಗೆ ಸಲ್ಲಲೇಬೇಕಾದ ಭಾರತರತ್ನ ಗೌರವವ ನ್ನು ನೀಡಲು ಪ್ರಧಾನಿ ಹಾಗೂ ರಾಷ್ಟ್ರತಿ ಯವರಿಗೆ ಮನವಿ ಸಲ್ಲಿಸಲಾ ಗುವುದು ಎಂದು ಹೇಳಿದರು. ಸಿದಟಛಿ ಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿರುವುದಕ್ಕೆ ದೈವ ಶಕ್ತಿಯೇ ಕಾರಣ. ದೈಹಿಕವಾಗಿ ಶ್ರೀಗಳು ಕ್ಷೀಣಿಸಿದರೂ
ಆರೋಗ್ಯದಲ್ಲಿ ಪ್ರತಿ ಕ್ಷಣದಲ್ಲೂ ಚೇತರಿಕೆ ಕಾಣುತ್ತಾ ಅಚ್ಚರಿ ಮೂಡಿಸುತ್ತಿದ್ದಾರೆ
ಎಂದು ಅಭಿಪ್ರಾಯಪಟ್ಟರು.