Advertisement

ಕೈಗೆ ಸಿಬಲ್‌ ಇಕ್ಕಟ್ಟು

11:47 AM Dec 08, 2017 | |

ಹೊಸದಿಲ್ಲಿ  /ಅಹಮದಾಬಾದ್‌: ಅಯೋಧ್ಯೆ ವಿಚಾರಣೆ ಮುಂದೂಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಮಾಡಿರುವ ವಾದವು ಇದೀಗ ಕಾಂಗ್ರೆಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಈ ವಿಚಾರ ತನಗೆ ಮುಳುವಾಗಿ ಪರಿಣಮಿಸುವ ಸಾಧ್ಯತೆಯನ್ನು ಮನಗಂಡಿರುವ ಕಾಂಗ್ರೆಸ್‌, ಗುಜರಾತ್‌ ಚುನಾವಣಾ ಪ್ರಚಾರದಿಂದ ದೂರವಿರುವಂತೆ ಸಿಬಲ್‌ಗೆ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕಳೆದ ಒಂದು ತಿಂಗಳಿಂದ ಪಟೇಲರ ಮೀಸಲಿಗೆ ಸಂಬಂಧಿಸಿ ಮೀಸಲು ಹೋರಾಟಗಾರರ ಜತೆ ಮಾತುಕತೆ ನಡೆಸುವಲ್ಲಿ ಸಿಬಲ್‌ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಈಗ ಅಯೋಧ್ಯೆ ವಿವಾದದಿಂದಾಗಿ ಅವರು ಗುಜರಾತ್‌ನಿಂದ ದೂರವುಳಿಯಬೇಕಾದ ಸ್ಥಿತಿ ಬಂದಿದೆ.

ಇನ್ನೊಂದೆಡೆ, ಕೋರ್ಟ್‌ನಲ್ಲಿ ವಿಚಾರಣೆ ಮುಂದೂಡುವಂತೆ ಆಗ್ರಹಿಸಿರುವ ಸಿಬಲ್‌ ಅವರನ್ನು ಕೂಡಲೇ ಪಕ್ಷದಿಂದ ವಜಾ ಮಾಡಬೇಕು ಅಥವಾ ಅವರೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ರಾಹುಲ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಏರುವ ಹೊತ್ತಿನಲ್ಲೇ ಸಿಬಲ್‌ ಹೇಳಿಕೆಯು ಪಕ್ಷಕ್ಕೆ ಹಾನಿ ಉಂಟುಮಾಡಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಉತ್ತರಪ್ರದೇಶ ಕಾಂಗ್ರೆಸ್‌ನ ಹಿರಿಯ ಮುಸ್ಲಿಂ ನಾಯಕ ಸಿರಾಜ್‌ ಮೆಹಿª ಪತ್ರ ಬರೆದಿದ್ದಾರೆ.

ಇದೇ ವೇಳೆ, ಕಾಂಗ್ರೆಸ್‌ ರಾಜ್ಯಸಭೆ ಸದಸ್ಯ ಅಹ್ಮದ್‌ ಪಟೇಲ್‌ ಅವರೇ ಮುಂದಿನ ಸಿಎಂ ಅಭ್ಯರ್ಥಿಯಾಗಿದ್ದು, ಮುಸ್ಲಿಮರೆಲ್ಲರೂ ಕಾಂಗ್ರೆಸ್‌ಗೆà ಮತ ಹಾಕಬೇಕು ಎಂಬ ಪೋಸ್ಟರ್‌ಗಳು ಗುಜರಾತ್‌ನ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ರಾರಾಜಿಸತೊಡಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಅಹ್ಮದ್‌ ಪಟೇಲ್‌, “ಇದು ಬಿಜೆಪಿಯ ಕುತಂತ್ರ. ನಾನು ಸಿಎಂ ಅಭ್ಯರ್ಥಿಯ ರೇಸ್‌ನಲ್ಲಿ ಇಲ್ಲ. ಮುಂದೆಯೂ ಇರುವುದಿಲ್ಲ,’ ಎಂದಿದ್ದಾರೆ. 

“ಪ್ರಧಾನಿ ಮೋದಿ ಅವರಿಗೆ ದಿನಕ್ಕೊಂದು ಪ್ರಶ್ನೆ’ಯ ಸರಣಿಯಲ್ಲಿ ಗುರುವಾರ 9ನೇ ಪ್ರಶ್ನೆಯನ್ನು ಹಾಕಿರುವ ರಾಹುಲ್‌, “ರೈತರ ಸಾಲವನ್ನೂ ಮನ್ನಾ ಮಾಡಲಿಲ್ಲ, ಉತ್ಪನ್ನಗಳಿಗೆ ಪ್ರೋತ್ಸಾಹ ಧನವನ್ನೂ ನೀಡಲಿಲ್ಲ. ಬೆಳೆ ವಿಮೆಯ ಲಾಭವನ್ನೂ ನೀಡಲಿಲ್ಲ. ಕೊಳವೆಬಾವಿಗಳನ್ನೂ ತೆರೆಸಲಿಲ್ಲ. ಇದಕ್ಕೇನಂತೀರಾ,’ ಎಂದು ಕೇಳಿದ್ದಾರೆ.

Advertisement

ಸಿಬಲ್‌ ಸುನ್ನಿ ಮಂಡಳಿಯನ್ನು ಪ್ರತಿನಿಧಿಸಿದ್ದು ಹೌದಾ?: ಅಯೋಧ್ಯೆ ವಿಚಾರಣೆ ವೇಳೆ ಸಿಬಲ್‌ ನಿಜವಾಗಿಯೂ ಪ್ರತಿನಿಧಿಸಿದ್ದು ಯಾರನ್ನು ಎಂಬ ಪ್ರಶ್ನೆ ಇದೀಗ ಮೂಡಿದೆ. ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿದ್ದರು ಎಂದು ಪ್ರಧಾನಿ ಮೋದಿ, ಅಮಿತ್‌ ಶಾ ಮತ್ತಿತರರು ಆರೋಪಿಸಿ ದ್ದರು. ಅದನ್ನು ಸಿಬಲ್‌ ಅಲ್ಲಗಳೆದಿದ್ದರು. ಸುನ್ನಿ ಮಂಡಳಿಯೂ, ನಾವು ಸಿಬಲ್‌ಗೆ ವಿಚಾರಣೆ ಮುಂದೂಡುವಂತೆ ಕೋರಿ ಎಂದು ಹೇಳಿರಲಿಲ್ಲ ಎಂದಿತ್ತು. ಇದೀಗ ಈ ಕುರಿತ ಸ್ಪಷ್ಪನೆ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾದ ಮಾಹಿತಿ ಪ್ರಕಾರ, ಸಿಬಲ್‌ ಅವರು 2894, 7226, 4192 ಹಾಗೂ 8096 ಸಂಖ್ಯೆಯ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ 4192 ಸಂಖ್ಯೆಯು ಸುನ್ನಿ ವಕ್ಫ್ ಮಂಡಳಿಯದ್ದು. ಹಾಗಾಗಿ, ಅವರನ್ನು ಸಿಬಲ್‌ ಪ್ರತಿನಿಧಿಸುತ್ತಿರುವುದು ಸ್ಪಷ್ಟ. ಆದರೆ, ಮಂಗಳವಾರ ಸುಪ್ರೀಂ ಹೊರಡಿಸಿರುವ ಆದೇಶದ ಪ್ರತಿಯಲ್ಲಿ, “2894 ಮತ್ತು 2011 ಅನ್ನು ಪ್ರತಿನಿಧಿಸಿದ ಸಿಬಲ್‌’ ಎಂಬ ಪ್ರಸ್ತಾವವಿದೆ. ಅಂದರೆ, ಮಂಗಳವಾರದ ವಿಚಾರಣೆ ವೇಳೆ ಸಿಬಲ್‌ ಅವರು ಸುನ್ನಿ ಮಂಡಳಿಯ ಪರ ವಾದ ಮಂಡಿಸಿಲ್ಲ ಎಂದು ಅರ್ಥ. ಹಾಗಿದ್ದರೆ, ಅಂದು ಮಂಡಳಿಯನ್ನು ಯಾರೂ ಪ್ರತಿನಿಧಿಸಿಯೇ ಇಲ್ಲವೇ ಎಂಬ ಪ್ರಶ್ನೆಯೂ ಈಗ ಮೂಡಿದೆ.

ಟೋಪಿ ಹಾಗೂ ಗಡ್ಡಧಾರಿ'(ಮುಸ್ಲಿಮರು)ಗಳ ಜನಸಂಖ್ಯೆ ಇಳಿಸಬೇಕಾದ ಆವಶ್ಯಕತೆಯಿದೆ. ನಾನಿಲ್ಲಿ ಬಂದಿದ್ದೇ ಭಯ ಹುಟ್ಟಿಸಲು. ಯಾರಾದರೂ ಕೋಮುಗಲಭೆಗೆ ಪ್ರಚೋದಿಸಿದರೆ ಸುಮ್ಮನೆ ಬಿಡಲ್ಲ.
 ಶೈಲೇಶ್‌ ಸೊತ್ತಾ, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next