ರಾಮನಗರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್ 19 ಸೈನಿಕರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೊಂ ದನ್ನು ಸೀಲ್‌ಡೌನ್ ಮಾಡಲಾಗಿದೆ. ಸ್ಯಾನಿಟೈಸೇಷನ್‌ಗೆ ಎಸ್‌ಪಿ ಕಚೇರಿಯಿರುವ ಪೊಲೀಸ್ ಭವನ ಕೂಡ ಬಂದ್ ಆಗಿದೆ.
ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಒಂದು ದಿನದ ಮಟ್ಟಿಗೆ ಲಾಕ್‌ಡೌನ್ ಆಗಿದೆ. ಜಿಲ್ಲೆಯ ಕನಕಪುರ ತಾಲೂಕು ಕೋಡಿಹಳ್ಳಿ ಪೊಲೀಸ್ ಠಾಣೆ ಎಸ್‌ಐಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆ ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 15 ಮಂದಿ ಸಿಬ್ಬಂದಿ ಕ್ವಾರಂಟೈನ್‌ಗೊಳಿಸಲಾಗಿದೆ.
ಪೊಲೀಸ್ ಭವನ ಬಂದ್: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಒಬ್ಬ ಸಿಬ್ಬಂದಿಗೆ ಸೊಂಕು ಪತ್ತೆ ಯಾಗಿರುವುದರಿಂದ ಪೊಲೀಸ್ ಭವನವನ್ನು ಸ್ಯಾನಿಟೈಸ್‌ಗೊಳಿಸಲು ಕಚೇರಿ ಮುಚ್ಚಲಾ ಗಿದೆ ಎಂದು ಜಿಲ್ಲಾ ಎಸ್‌ಪಿ ಅನೂಪ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ರಾಮನಗರದಲ್ಲಿ ಒಟ್ಟು 6 ಮಂದಿ ಪೊಲೀಸರಿಗೆ ಸೋಂಕು ತಗುಲಿದೆ. ಈ ಪೈಕಿ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ದಿನದ ಮಟ್ಟಿಗೆ ಟೊಯೋಟಾ ಬಂದ್: ಇನ್ನೊಂದೆಡೆ ಬಿಡದಿಯ ಟೊಯೋಟಾ ಕಾರ್ಖಾನೆಯ ಕಾರ್ಮಿಕರೊಬ್ಬರು ಸೋಂಕು ತಗುಲಿ ಮೃತಪಟ್ಟಿದ್ದಾರೆ. ಸದರಿ ನೌಕರನ ತಂದೆಯವರಲ್ಲಿ ಸೋಂಕು ಕಾಣಿಸಿಕೊಂಡು ಅವರು ಜುಲೈ 2ರಂದು ಮೃತಪಟ್ಟಿದ್ದರು. ಇದೀಗ ನೌಕರ ಮೃತಪಟ್ಟಿದ್ದಾನೆ. ಹೀಗಾಗಿ ಟೊಯೋಟಾ ಕಾರ್ಖಾನೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.
ಪಕ್ಕದ ಮನೆಗೂ ಹರಡಿದ ಸೋಂಕು?: ನಗರ ದ ಬಡಾವಣೆಯೊಂದರಲ್ಲಿ ಕೆಲದಿನಗಳ ಹಿಂದೆ ಸೋಂಕಿತ ವ್ಯಕ್ತಿಯಿದ್ದ ಪಕ್ಕದ ಮನೆಗೂ ಸೋಂಕು ಹರಡಿರುವ ಬಗ್ಗೆ ಮಾಹಿತಿ ಲಭ್ಯವಾ ಗಿದೆ. ಸೀಲ್‌ಡೌನ್ ಬೇಡ ಎಂದು ಹರಿಹಾಯುವ ಮಂದಿಗೆ ಈ ಪ್ರಕರಣ ಪಾಠವಾಗಬೇಕಾಗಿದೆ.
ಆರೋಗ್ಯ ಇಲಾಖೆ ಎಡವಟ್ಟು: ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ವಸತಿ ನಿಲಯದಲ್ಲಿ ಸೋಂಕಿನ ಶಂಕೆಯಿದ್ದ ಕಾರಣ 25 ಮಂದಿಯನ್ನು ಕ್ವಾರಂಟೈನ್‌ಗೊಳಿಸಲಾ ಗಿತ್ತು. ಅವೆರೆಲ್ಲ ಗಂಟಲ ದ್ರವದ ಫಲಿತಾಂಶ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಬಿಡು ಗಡೆ ಮಾಡಲಾಗಿತ್ತು. ಆದರೆ ಬಿಡುಗಡೆಯಾದವರ ಪೈಕಿ ಒಬ್ಬರಿಗೆ ಸೋಂಕಿರುವುದು ಗೊತ್ತಾಗಿ, ಅತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಳೇಗೌಡನದೊಡ್ಡಿ, ಚಿಕ್ಕೇಗೌಡನದೊಡ್ಡಿ ಹಾಗೂ ಮಾರೇಗೌಡನದೊಡ್ಡಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಶೋಧ ನಡೆಸುತ್ತಿದ್ದರೆ ಎಂದು ಗೊತ್ತಾಗಿದ್ದು, ಆ ಗ್ರಾಮದ ನಿವಾಸಿಗಳು ಇಲಾಖೆ ವಿರುದ ತೀವ್ರ ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ ಎಂದು ಗೊತ್ತಾಗಿದೆ.