Advertisement

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

03:07 PM Sep 19, 2020 | keerthan |

ವಿಜಯಪುರ: ಜಿಲ್ಲೆಯ ತಾಳಿಕೋಟೆ ಠಾಣಾ ಎಸ್ ಐ ಶಿವಾಜಿ ಪವಾರ್ ಅವರು ರೈತನಂತೆ ಮಾರುವೇಶದಲ್ಲಿ ಹೋಗಿ ಗಾಂಜಾ ಬೆಳೆದಿದ್ದ ಇಬ್ಬರನ್ನು ಬಂಧಿಸಿ 75 ಕೆಜಿ ಗಾಂಜಾ ವಶಕ್ಕೆ ಪಡೆದಿರುವ ಘಟನೆ ಜರುಗಿದೆ.

Advertisement

ಮುದ್ದೇಬಿಹಾಳ ತಾಲೂಕ ಚವನಭಾವಿ ಗ್ರಾಮ‌ದ ಜಮೀನಿನಲ್ಲಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ಎಸ್ಐ ಶಿವಾಜಿ ಪವಾರ್ ಇಂದು ನಸುಕಿನ 3-30 ರ ಸುಮಾರಿಗೆ ಮಾರುವೇಶದಲ್ಲಿ ಗ್ರಾಮಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಚವನಭಾವಿ ಗ್ರಾಮದ ಭೀಮಣ್ಣ ತುರಡಗಿ ಹಾಗೂ ಕೇಶಪ್ಪ ಈಳಿಗೇರ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿ, 75 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಈ ಕಾರಣಕ್ಕೆ ‘ಈ ಸಲ ಕಪ್ ನಮ್ಮದೇ’ ಎಂದ ಬೆಂಗಳೂರು ಪೊಲೀಸರು!

ಘಟನಾ ಸ್ಥಳಕ್ಕೆ ತೆರಳಿದ ಮುದ್ದೇಬಿಹಾಳ ತಹಸೀಲ್ದಾರ ಜಿ.ಎಸ್.ಮಳಜಿ ಪಂಚನಾಮೆ ನಡೆಸಿದ್ದಾರೆ. ಎಸ್ಐ ಶಿವಾಜಿ ಪವಾರ ಕಾರ್ಯಕ್ಕೆ ಎಸ್ಪಿ ಅನುಪಮ ಅಗರವಾಲ್, ಡಿಎಸ್ಪಿ ಶಾಂತವೀರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next