ಮಾಗಡಿ: ತಾವರೆಕೆರೆಯ ಶ್ಯಾಮಯ್ಯನಕೆರೆ ಒತ್ತು ವರಿತೆರವುಗೊಳಿಸಿ ಪ್ರಾಧಿಕಾರದಿಂದ ಅಭಿವೃದ್ಧಿ ಮಾಡುವಂತೆ ತಾವರೆಕೆರೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. 5 ಎಕರೆ 35 ಗುಂಟೆ ವಿಸ್ತೀರ್ಣ ಹೊಂದಿರುವ ಶ್ಯಾಮಯ್ಯನ ಕೆರೆಯಿಂದ ತಾವರೆಕೆರೆಗೆ ಸಾಕಷ್ಟು ಅನುಕೂಲವಾಗಿದೆ.
ಈ ಕೆರೆ ಅಭಿವೃದ್ಧಿಯಾದರೆಅಂತರ್ಜಲ ಹೆಚ್ಚಾಗಿ ಪ್ರಾಣಿ ಪಕ್ಷಿಗಳಿಗೂಆಸರೆಯಾಗುತ್ತದೆ. ಸುಂದರ ಪರಿಸರ ನಿರ್ಮಾಣಕೂಡ ಆಗುವುದರಿಂದ ಕೂಡಲೇ ಸರ್ಕಾರ ಕೆರೆಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿಮಾಡಿದ್ದಾರೆ.
ಹಣ ಬಿಡುಗಡೆ ಮಾಡಿ: ಸಮಾಜ ಸೇವಕಟಿ.ಎನ್.ಮೂರ್ತಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಅವರು ಇತ್ತೀಚೆಗಷ್ಟೆಹುಟ್ಟುಹಬ್ಬ ಆಚರಣೆ ಬದಲು ತಮ್ಮ ಸುತ್ತಮುತ್ತಲಿನ ಕೆರೆ ಅಭಿವೃದ್ಧಿಪಡಿಸಿ ಅಂತರ್ಜಲಹೆಚ್ಚಾಗುತ್ತದೆ.
ಈ ಕೆಲಸವನ್ನು ಮಾಡಿ ಎಂದುಹೇಳಿದ್ದರು. ಇದು ನಮಗೆ ಪ್ರೇರಣೆಯಾಗಿದ್ದು,ಮಾಗಡಿ ಯೋಜನಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಕೆರೆ ಒತ್ತುವರಿ ತೆರವುಗೊಳಿಸಿ, ಕೆರೆಯನ್ನು ಸರ್ವೆ ಮಾಡಿ ಗಡಿಭಾಗ ಗುರುತಿ ಸುವ ಕೆಲಸ ಮಾಡಬೇಕು. ಕೆರೆ ಅಭಿವೃದ್ಧಿಗೆ ಹಣಬಿಡುಗಡೆ ಮಾಡಿ ಎಂದು ಮನವಿ ಮಾಡಿದರು.
ಕಸ ಹಾಕುವುದನ್ನು ನಿಲ್ಲಿಸಿ: ಬೆಂಗಳೂರಿನತ್ಯಾಜ್ಯವನ್ನು ತಂದು ಕೆರೆಗೆ ಸುರಿಯುತ್ತಿರುವುದರಿಂದಕೆರೆ ಸಂಪೂರ್ಣ ಕಲುಷಿತಗೊಂಡು ಸಾಕಷ್ಟುತೊಂದರೆಯಾಗುತ್ತಿದೆ. ಅಂತರ್ಜಲ ಮಟ್ಟದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಸರ್ಕಾರ ಕೆರೆಅಭಿವೃದ್ಧಿಗೆ ಗಮನ ಹರಿಸಬೇಕು. ತಾವರೆಕೆರೆಪಟ್ಟಣದಲ್ಲೇ ಇರುವ ಕೆರೆಯನ್ನು ಅಭಿವೃದ್ಧಿಮಾಡಲು ಎಲ್ಲರೂ ಕೈ ಜೋಡಿಸಬೇಕು. ಸರ್ಕಾರಕೂಡಲೇ ನಮ್ಮ ಮನವಿಗೆ ಸ್ಪಂದಿಸಬೇಕು ಎಂದುಸಾಮಾಜಿಕ ಹೋರಾಟಗಾರ ಚೇತನ್ ತಿಳಿಸಿದ್ದಾರೆ.