Advertisement

ಶುಭ್‌ಮನ್‌ ಗಿಲ್‌ ಇಂಡಿಯಾ ಬ್ಲೂ ನಾಯಕ

03:24 AM Aug 07, 2019 | sudhir |

ಮುಂಬಯಿ: ಮುಂಬರುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಕೂಟಕ್ಕಾಗಿ ಹಾಲಿ ಚಾಂಪಿಯನ್‌ ಇಂಡಿಯಾ ಬ್ಲೂ ತಂಡದ ನಾಯಕರಾಗಿ ಶುಭ್‌ಮನ್‌ ಗಿಲ್‌ ಅವರನ್ನು ಹೆಸರಿಸಲಾಗಿದೆ. ದುಲೀಪ್‌ ಟ್ರೋಫಿ ಆ. 17ರಿಂದ ಬೆಂಗಳೂರಿನಲ್ಲಿ ನಡೆಯಲಿದೆ.

Advertisement

ಗಿಲ್‌ ಅವರು ಇತ್ತೀಚೆಗೆ ನಡೆದ ವೆಸ್ಟ್‌ಇಂಡೀಸ್‌ “ಎ’ ತಂಡದೆದುರಿನ ಐದು ಅನಧಿಕೃತ ಏಕದಿನ ಪಂದ್ಯಗಳಲ್ಲಿ ಭಾರತ “ಎ’ ತಂಡದಲ್ಲಿ ಆಡಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಮೂರು ಅರ್ಧಶತಕ ಹೊಡೆದಿದ್ದರು.

ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಅಖಲ ಭಾರತ ಸೀನಿಯರ್‌ ಆಯ್ಕೆ ಸಮಿತಿ ದುಲೀಪ್‌ ಟ್ರೋಫಿಯಲ್ಲಿ ಭಾಗವಹಿಸುವ ಭಾರತ ಬ್ಲೂ, ಭಾರತ ಗ್ರೀನ್‌ ಮತ್ತು ಭಾರತ ರೆಡ್‌ ತಂಡಗಳನ್ನು ಆಯ್ಕೆ ಮಾಡಿದೆ. ಈ ಕೂಟ ಆ. 17ರಿಂದ ಸೆ. 8ರವರೆಗೆ ನಡೆಯಲಿದೆ.

ಇಂಡಿಯಾ ಬ್ಲೂ
ಶುಭ್‌ಮನ್‌ ಗಿಲ್‌ (ನಾಯಕ), ರುತುರಾಜ್‌ ಗಾಯಕ್ವಾಡ್‌, ರಜತ್‌ ಪಟಿದರ್‌, ರಿಕಿ ಭುಯಿ, ಅನ್ಮೋಲ್‌ಪ್ರೀತ್‌ ಸಿಂಗ್‌, ಅಂಕಿತ್‌ ಭಾವೆ°, ಸ್ನೆಲ್‌ ಪಟೇಲ್‌, ಶ್ರೇಯಸ್‌ ಗೋಪಾಲ್‌, ಸೌರಭ್‌ ಕುಮಾರ್‌, ಜಲಜ್‌ ಸಕ್ಸೇನಾ, ತುಷಾರ್‌ ದೇಶಪಾಂಡೆ, ಬಾಸಿಲ್‌ ಥಂಪಿ, ಅಂಕಿತ್‌ ಚೌಧರಿ, ದಿವೇಶ್‌ ಪಥಾನಿಯ, ಅಶುತೋಷ್‌ ಅಮರ್‌.

ಇಂಡಿಯಾ ಗ್ರೀನ್‌
ಫೈಜ್‌ ಫ‌ಜಾಲ್‌ (ನಾಯಕ), ಅಕ್ಷತ್‌ ರೆಡ್ಡಿ, ಧ್ರುವ್‌ ಶೊರೆ, ಸಿದ್ದೇಶ್‌ ಲಾಡ್‌, ಪ್ರಿಯಂ ಗರ್ಗ್‌, ಆಕಾಶ್‌ದೀಪ್‌ ನಾಥ್‌, ರಾಹುಲ್‌ ಚಹರ್‌, ಧಮೇಂದ್ರ ಸಿನ್ಹ ಜಡೇಜ, ಜಯಂತ್‌ ಯಾದವ್‌, ಅಂಕಿತ್‌ ರಜಪೂತ್‌, ಇಶಾನ್‌ ಪೊರೆಲ್‌, ತನ್ವೀರ್‌ ಉಲ್‌ ಹಕ್‌, ಅಕ್ಷಯ್‌ ವಾಡ್ಕರ್‌, ರಾಜೇಶ್‌ ಮೊಹಂತಿ, ಮಿಲಿಂದ್‌ ಕುಮಾರ್‌.

Advertisement

ಇಂಡಿಯಾ ರೆಡ್‌
ಪ್ರಿಯಾಂಕ್‌ ಪಾಂಚಾಲ್‌ (ನಾಯಕ), ಅಭಿಮನ್ಯು
ಈಶ್ವರನ್‌, ಅಕ್ಷರ್‌ ಪಟೇಲ್‌, ಕರುಣ್‌ ನಾಯರ್‌, ಇಶಾನ್‌ ಕಿಶನ್‌, ಹಪ್ರೀತ್‌ ಸಿಂಗ್‌ ಭಾಟಿಯ, ಮಹಿಪಾಲ್‌ ಲೊನ್ರೊರ್‌, ಆದಿತ್ಯ ಸರ್ವಾಟೆ, ಅಕ್ಷಯ್‌ ವಾಖರೆ, ವರುಣ್‌ ಆರನ್‌, ರೋನಿತ್‌ ಮೊರೆ, ಜಯದೇವ್‌ ಉನಾದ್ಕತ್‌, ಸಂದೀಪ್‌ ವಾರಿಯರ್‌, ಅಂಕಿತ್‌ ಕಾಲ್ಸಿ

Advertisement

Udayavani is now on Telegram. Click here to join our channel and stay updated with the latest news.

Next