Advertisement

ಶುಭಮನ್‌ ಗಿಲ್‌ ಶತಕ : ಭಾರತ “ಎ’ದಿಟ್ಟ ಉತ್ತರ

10:01 AM Feb 11, 2020 | sudhir |

ಲಿಂಕನ್‌ (ನ್ಯೂಜಿಲ್ಯಾಂಡ್‌): ಇನ್‌ಫಾರ್ಮ್ ಆರಂಭಕಾರ ಶುಭಮನ್‌ ಗಿಲ್‌ ದಾಖಲಿಸಿದ ಇನ್ನೊಂದು ಅಮೋಘ ಶತಕ ಸಾಹಸದಿಂದ ನ್ಯೂಜಿಲ್ಯಾಂಡ್‌ “ಎ’ ತಂಡಕ್ಕೆ ಭಾರತ “ಎ’ ದಿಟ್ಟ ಉತ್ತರ ನೀಡಿದೆ. ಟೆಸ್ಟ್‌ ಪಂದ್ಯದ 3ನೇ ದಿನವಾದ ರವಿವಾರ ಒಂದೇ ವಿಕೆಟಿಗೆ 234 ರನ್‌ ಪೇರಿಸಿದೆ.

Advertisement

ಶುಭಮನ್‌ ಗಿಲ್‌ 107 ಮತ್ತು ಚೇತೇಶ್ವರ್‌ ಪೂಜಾರ 52 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಆರಂಭಿಕನಾಗಿ ಇಳಿದ ನಾಯಕ ಹನುಮ ವಿಹಾರಿ 59 ರನ್‌ ಮಾಡಿದರು. ನ್ಯೂಜಿಲ್ಯಾಂಡ್‌ “ಎ’ 9 ವಿಕೆಟಿಗೆ 386 ರನ್‌ ಬಾರಿಸಿ ತನ್ನ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದೆ.

ವಿಹಾರಿ-ಗಿಲ್‌ ಶತಕದ ಜತೆಯಾಟ
ಶನಿವಾರದ ದ್ವಿತೀಯ ದಿನದಾಟ ಮಳೆಯಿಂದ ರದ್ದುಗೊಂಡ ಬಳಿಕ ರವಿವಾರ ಪ್ರವಾಸಿ ಭಾರತ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ವಿಹಾರಿ-ಗಿಲ್‌ ಮೊದಲ ವಿಕೆಟಿಗೆ 111 ರನ್‌ ಪೇರಿಸಿ ಕಿವೀಸ್‌ಗೆ ಸವಾಲಾದರು. ಈ ಹಂತದಲ್ಲಿ ಬ್ಲೇರ್‌ ಟಿಕ್ನರ್‌ ಪ್ರವಾಸಿಗರ ಆರಂಭಿಕ ಜೋಡಿಯನ್ನು ಮುರಿದರು. ವಿಹಾರಿ ಅವರ 59 ರನ್‌ 73 ಎಸೆತಗಳಿಂದ ಬಂತು (9 ಬೌಂಡರಿ).

ಗಿಲ್‌ ಈಗಾಗಲೇ 153 ಎಸೆತ ನಿಭಾಯಿಸಿದ್ದು, 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದಾರೆ. ಪೂಜಾರ ಅವರ 52 ರನ್‌ 99 ಎಸೆತಗಳಿಂದ ಬಂದಿದೆ (7 ಬೌಂಡರಿ, 1 ಸಿಕ್ಸರ್‌).

ಮೊದಲ ಟೆಸ್ಟ್‌ನಲ್ಲಿ ಸೋಲಿನಂಚಿನಲ್ಲಿದ್ದ ಭಾರತವನ್ನು ಗಿಲ್‌ ಅಮೋಘ ಶತಕದ ಮೂಲಕ ರಕ್ಷಿಸಿದ್ದರು. ಇದರ ಬೆನ್ನಲ್ಲೇ ಅವರು ಭಾರತದ ಸೀನಿಯರ್‌ ಟೆಸ್ಟ್‌ ತಂಡಕ್ಕೆ ಕರೆ ಪಡೆದಿದ್ದರು. ಈಗ ಮತ್ತೂಂದು ಶತಕದ ಮೂಲಕ ಮೆರೆದಾಡಿದ್ದಾರೆ.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌ “ಎ’-9 ವಿಕೆಟಿಗೆ 386 ಡಿಕ್ಲೇರ್‌ (ಮಿಚೆಲ್‌ ಅಜೇಯ 103, ಫಿಲಿಪ್ಸ್‌ 65, ಕ್ಲೀವರ್‌ 53, ಸಿರಾಜ್‌ 75ಕ್ಕೆ 2, ವಾರಿಯರ್‌ 50ಕ್ಕೆ 2, ಆರ್‌. ಅಶ್ವಿ‌ನ್‌ 98ಕ್ಕೆ 2, ಆವೇಶ್‌ 82ಕ್ಕೆ 2, ನದೀಂ 59ಕ್ಕೆ 1). ಭಾರತ “ಎ’-1 ವಿಕೆಟಿಗೆ 234 (ಗಿಲ್‌ ಬ್ಯಾಟಿಂಗ್‌ 107, ಪೂಜಾರ ಬ್ಯಾಟಿಂಗ್‌ 52, ವಿಹಾರಿ 59).

Advertisement

Udayavani is now on Telegram. Click here to join our channel and stay updated with the latest news.

Next