Advertisement
“ಅಂಬುಜಾ’ ಚಿತ್ರದ ಹೈಲೈಟ್ ಏನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಒಂದು ಹೊಸ ವಿಚಾರ ಎಂಬುದು ಚಿತ್ರತಂಡದ ಮಾತು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಿ, “ಚಿತ್ರದಲ್ಲಿ ಒಂದು ಹೊಸ ವಿಚಾರವನ್ನು ಹೇಳಿದ್ದೇವೆ. ಚಿತ್ರದ ಕಂಟೆಂಟ್ ತುಂಬಾ ಹೊಸದಾಗಿದೆ. ತುಂಬಾ ಫ್ರೆಶ್ ಆಗಿರುವ ಕಂಟೆಂಟ್ ಇದೆ. ಈವರೆಗೆ ಎಲ್ಲೂ ಬಾರದಿರುವ ವಿಚಾರವನ್ನು ಹೇಳಿದ್ದೇವೆ. ಈ ಘಟನೆ ಬೆಳಕಿಗೆ ಬಂದಿದ್ದೇ 2020ರಲ್ಲಿ. ಆ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಇಷ್ಟು ದಿನ ಮಾಡಿದ ಚಿತ್ರೀಕರಣ ನನಗೆ ತುಂಬಾ ಖುಷಿ ಕೊಟ್ಟಿದೆ’ ಎನ್ನುತ್ತಾರೆ.
Related Articles
Advertisement
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ರಾಜೇಶ್ ಕೃಷ್ಣನ್, ಅನನ್ಯಭಟ್, ಅನುರಾಧ ಭಟ್, ಎಂ.ಡಿ.ಪಲ್ಲವಿ ಹಾಗೂ ಬೇಬಿ ಆಕಾಂಕ್ಷ ಹಾಡಿದ್ದಾರೆ. ಈ ಎಲ್ಲಾ ಹಾಡುಗಳಿಗೆ ಪ್ರಸನ್ನ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಹಾಡು ಕೇಳಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಮ್ಮ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಮಾತನಾಡುವ ಅವರು, “ಅಂಬುಜಾ ನಾನೇ ಬರೆದ ಕಥೆ. ಲಂಬಾಣಿ ಕುಟುಂಬದಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಕಥೆ ಕೇಳಿ ಶ್ರೀನಿಯವರು ಖುಷಿಯಾದರು. ಯಾವುದೇ ಬದಲಾವಣೆ ಮಾಡದೇ, ಅದಕ್ಕೆ ಚಿತ್ರಕತೆ, ಸಂಭಾಷಣೆ ರಚಿಸಿದರು. ಸಾಹಿತ್ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಆದರೆ, ಯಾವುದೇ ಅಶ್ಲೀಲತೆ ಇಲ್ಲದೇ ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ. ನನಗೆ ಮೊದಲ ಸಿನಿಮಾದಲ್ಲೇ ವಿಶ್ವಾಸ ಮೂಡಿದೆ, ಇದೊಂದು ಒಳ್ಳೆಯ ಸಿನಿಮಾವಾಗುತ್ತದೆ’ ಎನ್ನುತ್ತಾರೆ ನಿರ್ಮಾಪಕ ಕಾಶೀನಾಥ್ ಮಡಿವಾಳ್