Advertisement

ಶುಭಾಪೂಂಜ ಮದುವೆ ಫಿಕ್ಸ್‌

07:25 AM Jun 16, 2020 | Lakshmi GovindaRaj |

ಕರಾವಳಿ ಬೆಡಗಿ ಶುಭಪೂಂಜ ಡಿಸೆಂಬರ್‌ನಲ್ಲಿ ಮದುವೆ ಆಗುತ್ತಿದ್ದಾರೆ. ಹೌದು ಈ ಸುದ್ದಿಯನ್ನು ಸ್ವತಃ ಶುಭಪೂಂಜ ಅವರೇ ಉದಯವಾಣಿಗೆ ಸ್ಪಷ್ಟಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು  ಕಾಲ ಅನೇಕ ಚಿತ್ರಗಳ ಮೂಲಕ ಗಮನ ಸೆಳೆದ ಶುಭಪೂಂಜ ಈಗ ಮದುವೆ ಆಗುವ ಖುಷಿಯಲ್ಲಿದ್ದಾರೆ.

Advertisement

ಅಂದಹಾಗೆ, ಶುಭಪೂಂಜ ಅವರನ್ನು ಕೈ ಹಿಡಿಯುತ್ತಿರುವ ಹುಡುಗನ ಹೆಸರು ಸುಮಂತ್‌ ಬಿಲ್ಲವ. ಮೂಲತಃ ಕುಂದಾಪುರದ  ವರಾಗಿರುವ ಸುಮಂತ್‌ ಬಿಲ್ಲವ ಜಯ ಕರ್ನಾಟಕ ಸಂಘಟನೆಯಲ್ಲಿ ಸೌತ್‌ ವಿಂಗ್‌ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಕಮರ್ಷಿಯಲ್‌ ಗ್ಯಾಸ್‌ ಏಜೆನ್ಸಿಯೊಂದನ್ನು ನಡೆಸುತ್ತಿದ್ದಾರೆ. ಇವರೊಂದಿಗೆ ಶುಭಪೂಂಜ ವಿವಾಹ ಡಿಸೆಂಬರ್‌ನಲ್ಲಿ  ನೆರವೇರಲಿದೆ.

ಇನ್ನೂ ದಿನಾಂಕ ನಿಗದಿಯಾಗದ ಕಾರಣ, ಇಷ್ಟರಲ್ಲೇ ದಿನಾಂಕ ಘೋಷಣೆ ಮಾಡುವುದಾಗಿ ಶುಭಪೂಂಜ ತಿಳಿಸಿದ್ದಾರೆ. ಮುಂದಿನ ತಿಂಗಳು ಮಂಗಳೂರಿನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ  ಮದುವೆಯನ್ನು ಡಿಸೆಂಬರ್‌ ವೇಳೆಗೆ ನಡೆಸಲು ಮನೆಯವರು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next