Advertisement

ಶ್ರುತಿ ವಿಶ್ವಕರ್ಮ ಹಿಂದುಸ್ತಾನಿ ಗಾಯನ

06:00 AM Sep 07, 2018 | Team Udayavani |

ಕುಂದಾಪುರ ಸಂಗೀತ ಭಾರತಿ ಟ್ರಸ್ಟ್‌ ಆಶ್ರಯದಲ್ಲಿ ಆ.19ರಂದು ಯುವ ಪ್ರತಿಭೆ ಪುಣೆಯ ಕು| ಶ್ರುತಿ ವಿಶ್ವಕರ್ಮ ಪ್ರಸ್ತುತಪಡಿಸಿದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಜನಮನ ಸೂರೆಗೊಂಡಿತು.  ಸಂಗೀತವೇ ಆಸ್ತಿಯಾಗಿರುವ ಕುಟುಂಬದಲ್ಲಿ 1992ರಲ್ಲಿ ಜನಿಸಿದ ಶ್ರುತಿ 6 ವರ್ಷದ ಬಾಲೆಯಾಗಿರುವಾಗಲೇ ಕಿರಾಣಾ ಘರಾಣೆಯ ತಾಯಿ ಜಯಂತಿ ವಿಶ್ವಕರ್ಮ ಹಾಗೂ ತಂದೆ ಗಣಪತ್‌ರಾವ್‌ ವಿಶ್ವಕರ್ಮರಿಂದ ಸಂಗೀತದ ಮೊದಲ ಪಾಠ ಕಲಿತರು. ಮುಂದೆ ಕೆಲವು ವರ್ಷ ಗ್ವಾಲಿಯರ್‌ ಘರಾಣೆಯ ಡಾ| ವೀಣಾ ಸಹಸ್ರಬುದ್ಧೆಯವರಿಂದ ತರಬೇತಿ ಪಡೆದು ಪ್ರಸ್ತುತ ಆಗ್ರಾ ಘರಾಣೆ ಹಾಗೂ ಬೆಂಡಿಬಜಾರ್‌ ಘರಾಣೆಯ ಪಂ. ಕೇದಾರ್‌ ಬೊಡಾಸ್‌ ಅವರಿಂದ ಹುಬ್ಬಳ್ಳಿಯ ಡಾ| ಗಂಗೂಬಾಯಿ ಹಾನಗಲ್‌ ಗುರುಕುಲದಲ್ಲಿ ಹೆಚ್ಚಿನ ಶಿಕ್ಷಣ ಪಡೆಯುತ್ತಿರುವರು. 

Advertisement

ಮಿಯಾಮಲಾರ್‌ ರಾಗದೊಂದಿಗೆ ಆರಂಭಗೊಂಡ ಕಾರ್ಯಕ್ರಮ ಪೀಲು, ಕೀರ್ವಾನಿ ಬಳಿಕ ಭೈರವಿ ಹಾಡುವುದರ ಮೂಲಕ ಸಂಪನ್ನಗೊಂಡಿತು. ಸಂವಾದಿನಿಯಲ್ಲಿ ಗೌರೀಶ ಯಾಜಿ, ತಬಲಾದಲ್ಲಿ ವಿಘ್ನೇಶ ಎಸ್‌. ಕಾಮತ್‌, ತಾನ್‌ಪುರದಲ್ಲಿ ಕು| ವೀಣಾ ನಾಯಕ್‌ ಹಾಗೂ ವಿವೇಕ ಪೈ ಸಹಕರಿಸಿದರು.

ಪಿ.ಜಯವಂತ ಪೈ 

Advertisement

Udayavani is now on Telegram. Click here to join our channel and stay updated with the latest news.

Next