Advertisement
ಸದ್ಯ ಲಂಡನ್‌ನಲ್ಲಿ ಲಂಬೋದರ ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಶ್ರುತಿ ಪ್ರಕಾಶ್, ಈ ಚಿತ್ರದಲ್ಲಿ ಇಂದಿನ ಜಮಾನಾದ ಪ್ರಾಕ್ಟಿಕಲ್ ಹುಡುಗಿಯ ಗೆಟಪ್‌ನಲ್ಲಿ ಬಿಗ್‌ಸ್ಕ್ರೀನ್ ಮೇಲೆ ಬರಲು ತಯಾರಿ ನಡೆಸುತ್ತಿದ್ದಾರೆ. ಅದರ ಹಿಂದೆಯೇ ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರವೊಂದರಲ್ಲೂ ಶ್ರುತಿ ಅಭಿನಯಿಸುತ್ತಿದ್ದಾರೆ. ಇನ್ನು ಎರಡು-ಮೂರು ಕನ್ನಡದ ಚಿತ್ರಗಳಲ್ಲಿ ಶ್ರುತಿ ಪ್ರಕಾಶ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಅದ್ಯಾವುದೂ ಇನ್ನೂ ಖಚಿತವಾಗಿಲ್ಲ. ಚಿತ್ರರಂಗದಲ್ಲಿ ಅವಕಾಶಗಳು ಬರುತ್ತಿರುವುದರ ಬಗ್ಗೆ ಮಾತನಾಡುವ ಶ್ರುತಿ ಪ್ರಕಾಶ್, “”ಸಿನಿಮಾ ದಲ್ಲಿ ನಟಿಸಬೇಕು, ನಟಿಯಾಗಬೇಕು ಎಂಬ ಆಸೆ ನನಗೆ ಇರಲಿಲ್ಲ. ಆದ್ರೆ ಬಿಗ್‌ಬಾಸ್ ಮುಗಿಸಿ ಹೊರಬರುತ್ತಿದ್ದಂತೆ, ಒಂದಷ್ಟು ಸಿನಿಮಾಗಳ ಆಫರ್ ಬರೋದಕ್ಕೆ ಶುರುವಾದವು. ಒಳ್ಳೆಯ ಕಥೆ, ಒಳ್ಳೆಯ ಪಾತ್ರಗಳು ಇದ್ದಿದ್ದರಿಂದ ಮನೆಯಲ್ಲೂ ಕೂಡ ಎಲ್ಲರೂ ನನಗೆ ಬೆಂಬಲವಾಗಿ ನಿಂತರು. ಹಾಗಾಗಿ ಸದ್ಯಕ್ಕೆ ಎರಡು-ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಮುಂದೆ ಅಭಿನಯವನ್ನೇ ಕೆರಿಯರ್ ಆಗಿ ತೆಗೆದುಕೊಳ್ಳಬೇಕೋ…, ಅಥವಾ ನನ್ನ ನೆಚ್ಚಿನ ಸಂಗೀತ ಕ್ಷೇತ್ರದಲ್ಲೇ ಮುಂದುವರೆಯಬೇಕೋ…, ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ” ಎನ್ನುವ ಶ್ರುತಿ ಪ್ರಕಾಶ್, “”ನನಗೆ ಒಪ್ಪುವ ಪಾತ್ರಗಳು, ಚಿತ್ರಗಳು ಸಿಗುವವರೆಗೂ ಮಾಡುತ್ತೇನೆ. ಆದರೆ, ನಾನಾಗಿಯೇ ಚಿತ್ರಗಳನ್ನು ಹುಡುಕಿಕೊಂಡು ಹೋಗುವುದಿಲ್ಲ” ಎನ್ನುತ್ತಾರೆ. Advertisement
ಶ್ರುತಿ ಪ್ರಕಾಶಮಾನ
06:00 AM Nov 04, 2018 | |
Advertisement
Udayavani is now on Telegram. Click here to join our channel and stay updated with the latest news.