Advertisement

ಶ್ರುತಿ ಹರಿಹರನ್‌ ಇನ್ನೊಂದು ಕಿರುಚಿತ್ರ ನಿರ್ಮಾಣ

10:43 AM Jul 18, 2017 | Team Udayavani |

ನಾಯಕಿಯಾಗಿ ಬಿಝಿಯಾಗಿರುವ ಶ್ರುತಿ ಹರಿಹರನ್‌ ಈಗಾಗಲೇ “ಲಾಸ್ಟ್‌ ಕನ್ನಡಿಗ’ ಎಂಬ ಕಿರುಚಿತ್ರ ನಿರ್ಮಿಸಿರುವ ಸುದ್ದಿಯನ್ನು ನೀವು ಓದಿರುತ್ತೀರಿ. ತಮ್ಮ “ಕಲಾತ್ಮಿಕ’ ಎಂಬ ಬ್ಯಾನರ್‌ನಡಿ ಶ್ರುತಿ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಈಗಾಗಲೇ ಅನೇಕ ಕಿರುಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಮುಂದಿನ ತಿಂಗಳು “ಲಾಸ್ಟ್‌ ಕನ್ನಡಿಗ’ ಬಿಡುಗಡೆಯಾಗಲಿದೆ. ಈ ನಡುವೆಯೇ ಶ್ರುತಿ ಹರಿಹರನ್‌ ಮತ್ತೂಂದು ಕಿರುಚಿತ್ರ ನಿರ್ಮಿಸಿದ್ದಾರೆ. ಅದು “ರೀಟಾ’.

Advertisement

ಇದು ಕೂಡಾ ಸಂಪೂರ್ಣ ಹೊಸಬರ ತಂಡ. ರಚನ್‌ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಶ್ರೇಯಾ ಅಂಚನ್‌, ರೂಪಾ ನಟರಾಜ್‌, ಅಭಿನವ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. “ಮ್ಯಾರಿಟಲ್‌ ರೇಪ್‌’ ಕಾನ್ಸೆಪ್ಟ್ನಡಿ ಈ ಕಿರುಚಿತ್ರ ತಯಾರಾಗಿದ್ದು, ಇಂತಹ ಸಮಸ್ಯೆ ಕಾನೂನು ಮುಂದೆ ಬಂದರೆ ಕಾನೂನು ಏನು ಹೇಳುತ್ತದೆ. ನಮ್ಮ ಭಾರತದ ಕಾನೂನು ಯಾವ ರೀತಿ ಇದೆ ಎಂಬ ಅಂಶದೊಂದಿಗೆ ಈ ಕಿರು ಚಿತ್ರ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಕೂಡಾ ಮುಗಿದಿದೆ.

“ಈ ಕಾನ್ಸೆಪ್ಟ್ ತುಂಬಾ ಇಷ್ಟವಾಯಿತು. ಈ ಅಂಶ ಬಂದಾಗ ಎದುರಾಗುವ ಕಾನೂನು ತೊಡಕು ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ. ಒಂದು ಹೊಸ ಪ್ರಯತ್ನ’ ಎಂಬುದು ಶ್ರುತಿ ಹರಿಹರನ್‌ ಮಾತು. ಶ್ರುತಿ ಹರಿಹರನ್‌ “ಟೇಸ್ಲಾ’ ಎಂಬ ಮತ್ತೂಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದು ನಾಯಕಿ ಪ್ರಧಾನ ಚಿತ್ರ. ವಿನೋದ್‌ ಎನ್ನುವವರು ಆ ಸಿನಿಮಾದ ನಿರ್ದೇಶಕರು.

ಐದು ವಿಭಿನ್ನ ಗೆಟಪ್‌ಗ್ಳು ಆ ಸಿನಿಮಾದಲ್ಲಿ ಬರುತ್ತವೆಯಂತೆ. “ಹೊಸ ಬಗೆಯ ಚಿತ್ರ. ಈ ಚಿತ್ರವನ್ನು ನನ್ನದೇ ಕಲಾತ್ಮಿಕ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ. ಅದರ ಫ‌ಂಡಿಂಗ್‌ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೇವೆ. ನನಗೆ ಆ ತರಹದ ವಿಭಿನ್ನ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳೋದೆಂದರೆ ತುಂಬಾ ಇಷ್ಟ’ ಎನ್ನುತ್ತಾರೆ ಶ್ರುತಿ. ಸದ್ಯ “ತಾರಕ್‌’ ಚಿತ್ರೀಕರಣ ಮುಗಿಸಿರುವ ಶ್ರುತಿ ಡಬ್ಬಿಂಗ್‌ನಲ್ಲಿ ಬಿಝಿ. 

Advertisement

Udayavani is now on Telegram. Click here to join our channel and stay updated with the latest news.

Next