ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜುಲೈ 4) 30 ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಕಳೆದ 5 ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಅಪ್ರಾಪ್ತೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಇದುವರೆಗೆ 42 ಮಂದಿ ಬಂಧನವಾಗಿದ್ದು ಇನ್ನು ಹಲವರ ಬಂಧನ ಸಾಧ್ಯತೆ ಇದೆ. ಚಿಕ್ಕಮಗಳೂರಿನ ವಿಶೇಷ ಪೋಕ್ಸೋ ಕೋರ್ಟ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
5 ತಿಂಗಳಿನಲ್ಲಿ 42 ಮಂದಿ ಬಂಧನವಾಗಿದ್ದು, ಅತೀ ಹೆಚ್ಚು ಚಾರ್ಜ್ ಶೀಟ್ ಸಲ್ಲಿಕೆಯಾದ ಪ್ರಕರಣ ಇದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಉಳಿದ ಆರೋಪಿಗಳಾಗಿ ಪೊಲೀಸರು ಬೆನ್ನು ಹತ್ತಿದ್ದು, ಅಪರ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಸ್ಥಳದಲ್ಲೇ ಮೊಕ್ಕಂ ಹೂಡಿ ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಕಳೆದ 5 ತಿಂಗಳ ಹಿಂದೆ ಸ್ವಂತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ಅತ್ಯಾಚಾರಕ್ಕೆ ದೂಡಿದ್ದಳು. ಈ ಪ್ರಕರಣ ಸಂಬಂಧ ಅನೇಕರ ಬಂಧನವಾಗಿತ್ತು. ದಿನದಿನವೂ ಹೊಸ ಹೊಸ ತಿರುವುಗಳನ್ನು ಪ್ರಕರಣ ಪಡೆಯುತ್ತಲೆ ಸಾಗಿತ್ತು. ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಪೊಲೀಸರು, ಅತ್ಯಾಚಾರವಾಗಿರೋ ಸ್ಥಳ, ಆರೋಪಿಗಳ ಬಗ್ಗೆ ಸಾಕ್ಷ್ಯ ಹಾಗೂ ಅಪ್ರಾಪ್ತೆ ತಾಯಿಯ ಅಕೌಂಟ್ ಗೆ ಹಣ ವರ್ಗಾವಣೆಯಾಗಿರೋ ಬಗ್ಗೆ ಡಿಟೇಲ್ಸ್ ಸಂಗ್ರಹಿಸಲಾಗಿದೆ.
ವೀಡಿಯೋ ಸಂಗ್ರಹಿಸದ ವ್ಯಕ್ತಿ ಯಾರು, ಈ ಬಾಲಕಿಯನ್ನ ಹೇಗೆಲ್ಲಾ ಮಿಸ್ ಯೂಸ್ ಮಾಡಿಕೊಂಡಿರೋ ಮಾಹಿತಿ ಸಂಗ್ರಹಿಸಲಾಗಿದೆ. 30 ನಲ್ಲಿ ಚಾರ್ಜ್ ಶೀಟ್ ನಲ್ಲಿದೆ ಪ್ರಕರಣ ಸಂಪೂರ್ಣ ಡಿಟೇಲ್ಸ್ ಇದೆ.
ಜನವರಿ 30 ರಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಮಣ್ಯ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 2020ರಿಂದ ಬಾಲಕಿಯನ್ನು ಬ್ಲಾಕ್ ಮೇಲ್ ಮಾಡಿ ನಿರಂತರ ಅತ್ಯಾಚಾರವೆಸಗಿ ವಿಡಿಯೋ ಮಾಡಿಟ್ಟುಕೊಳ್ಳಲಾಗಿತ್ತು. ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ಕೀಚಕನಿಂದ ನಿರಂತರ ಅತ್ಯಾಚಾರ ನಡೆಸಲಾಗಿದೆ. ಸದ್ಯ ಚಿಕ್ಕಮಗಳೂರಿನ ಸಾಂತ್ವಾನ ಕೇಂದ್ರದಲ್ಲಿ ಬಾಲಕಿ ಆಶ್ರಯ ಪಡೆಯುತ್ತಿದ್ದಾಳೆ.