Advertisement

ಸಾಮೂಹಿಕ ಕೃಷಿಗೆ ಒತ್ತುನೀಡಿದ ರೈತರು

08:21 PM Nov 14, 2021 | Team Udayavani |

ಶೃಂಗೇರಿ: ರೈತರಿಂದಲೇ ಕಡೆಗಣನೆಗೆಒಳಗಾಗಿರುವ ಭತ್ತದ ಕೃಷಿಗೆ ಸಾಮೂಹಿಕಕೃಷಿ ಮಾಡುವ ಮೂಲಕ ಭತ್ತವನ್ನುಲಾಭದಾಯಕವಾಗಿ ಬೆಳೆಯಬಹುದುಎಂಬುದನ್ನು ಧರೆಕೊಪ್ಪ ಗ್ರಾಪಂನ ಹೊನ್ನವಳ್ಳಿಭಾಗದ ರೈತರು ನಿರೂಪಿಸಿದ್ದಾರೆ.

Advertisement

ವರ್ಷದಿಂದವರ್ಷಕ್ಕೆ ಕಡಿಮೆಯಾಗುತ್ತಿರುವ ಭತ್ತದ ಸಾಗುವಳಿನಡುವೆ ಸಂಘಟಿತರಾಗಿ ಭತ್ತದ ನಾಟಿ ಕಾರ್ಯದಮೂಲಕ ಗಮನ ಸೆಳೆದಿದ್ದಾರೆ.ಧರೆಕೊಪ್ಪ ಗ್ರಾಪಂನ ಹೊನ್ನವಳ್ಳಿ ಗ್ರಾಮದ16 ರೈತರ ಗುಂಪು 40 ಎಕರೆಯಷ್ಟು ಭತ್ತದ ಗದ್ದೆಸಾಗುವಳಿಯನ್ನು ಯಾಂತ್ರೀಕರಣದ ಮೂಲಕಮಾಡಿ ಉತ್ತಮ ಪೈರಿನ ನಿರೀಕ್ಷೆಯಲ್ಲಿದ್ದಾರೆ.ಬಹುತೇಕ ಸಣ್ಣ ಹಿಡುವಳಿದಾರರು ಒಟ್ಟುಗೂಡಿಸಾಮೂಹಿಕ ಕೃಷಿ ಮಾಡಿದ್ದಾರೆ.

ಕಳೆದ ವರ್ಷಮೊದಲ ಬಾರಿಗೆ ಹಾಳು ಬಿದ್ದ ಗದ್ದೆಯನ್ನು ರೈತರುಸಾಗುವಳಿ ಮಾಡಿದ್ದರು. ಈ ವರ್ಷ ಸಮೀಪದಮತ್ತಷ್ಟು ರೈತರು ಸೇರ್ಪಡೆಗೊಂಡು ಭತ್ತದ ನಾಟಿಕಾರ್ಯ ಯಶಸ್ವಿಯಾಗಿ ನಡೆಸಿದ್ದಾರೆ.ಆರಂಭದಿಂದಲೂ ಯಾಂತ್ರೀಕರಣಕ್ಕೆ ಒತ್ತುನೀಡಿ, ಭತ್ತದ ಸಸಿ ಮುಡಿಯನ್ನು ಒಂದೇ ಕಡೆಮಾಡಿ, ನಂತರ ನಾಟಿ ಕಾರ್ಯಕ್ಕೆ ಸಸಿಯನ್ನುಬಳಸಿಕೊಂಡಿದ್ದಾರೆ. ಪ್ಲಾಸ್ಟಿಕ್‌ ಶೀಟ್‌ ಮೇಲೆ ಸಸಿಮುಡಿ ಮಾಡಿದ್ದು, ನಾಟಿ ಯಂತ್ರವನ್ನು ಬಳಸಿನಾಟಿ ಮಾಡಲಾಗಿದೆ. ಕಡಿಮೆ ಖರ್ಚಿನಲ್ಲಿ, ಕಡಿಮೆಕೂಲಿಯಾಳು ಬಳಸಿ ನಾಟಿ ಮುಗಿಸಲಾಗಿದೆ.

ಸಾಲು- ಸಾಲು ನಾಟಿಯಾಗಿದ್ದು, ಭತ್ತದ ಕಳೆನಿರ್ವಹಣೆಯನ್ನು ಕೋನೋ ವೀಡರ್‌ ಬಳಸಿಕಳೆ ತೆಗೆಯಲಾಗಿದೆ. ಒಂದೆಡೆ ಸಸಿ ಮುಡಿಮಾಡಿದ್ದರಿಂದ ನಿರ್ವಹಣೆ ಸುಲಭವಾಗಿದ್ದು,ಬಿತ್ತನೆ ಬೀಜವು ಸಾಮಾನ್ಯ ಪದ್ದತಿಗೆ ಹೋಲಿಸಿದಲ್ಲಿಅಲ್ಪ ಪ್ರಮಾಣದಲ್ಲಿ ಬಳಸಲಾಗಿದೆ.40 ಎಕರೆಯಷ್ಟು ನಾಟಿ ಕಾರ್ಯ ಕೇವಲ3-4 ದಿನದಲ್ಲಿ ಮುಗಿಸಲಾಗಿದೆ. ಶೇ.30 ರಷ್ಟುನಾಟಿಯಲ್ಲಿ ಉಳಿತಾಯವಾಗಿದ್ದು, ಕೆಲಸವುತ್ವರಿತವಾಗಿ ಮುಕ್ತಾಯವಾಗಿತ್ತು.

ಸಾಂಪ್ರದಾಯಿಕಭತ್ತದ ನಾಟಿಗೆ ನಾಟಿ ಮಾಡುವ ಕೂಲಿಯಾಳು,ಉಳುಮೆ ಮಾಡುವವರು ಸೇರಿದಂತೆ ಸಾಕಷ್ಟುಕೂಲಿಯಾಳುಗಳ ಅಗತ್ಯವಿದೆ. ಕೀಟ ಬಾಧೆನಿಯಂತ್ರಣಕ್ಕೆ ಎಲ್ಲರೂ ಒಟ್ಟಾಗಿ ಸಿಂಪಡಣೆಮಾಡುವುದರಿಂದ ಅದರಲ್ಲಿ ಸಮಯ ಮತ್ತುಹಣದ ಉಳಿತಾಯವಾಗುತ್ತದೆ. ಎಲ್ಲಾ ರೈತರುಒಂದೇ ತಳಿಯ ಬಿತ್ತನೇ ಬೀಜವನ್ನು ಆಯ್ಕೆಮಾಡಿಕೊಂಡಿದ್ದಾರೆ.

Advertisement

ನಾಟಿಯಲ್ಲಿ ಕೃಷಿ ಇಲಾಖೆ, ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯು ಸಹಕಾರನೀಡಿದ್ದು, ಗುಂಪು ಕೃಷಿ ಯಶಸ್ವಿಯಾಗಿ ನಡೆದಿದೆ.ರೈತರಾದ ಹೊನ್ನವಳ್ಳಿ ರಮೇಶ್‌, ಶ್ರೀಕಂಠ ಹೆಗ್ಡೆ,ಶೇಷಗಿರಿಯಪ್ಪ, ಸುಬ್ಬರಾವ್‌, ಚಂದ್ರಮೌಳಿ,ಸುಬ್ರಮಣ್ಯ, ಶ್ರೀನಿವಾಸ್‌, ತಿಮ್ಮಯ್ಯ, ಜಗದೀಶ್‌,ಉಮೇಶ್‌, ಬಸವರಾಜ್‌, ಗೋಪಾಲ ಭಟ್‌,ಮಹಾಬಲೇಶ್‌ ಮುಂತಾದವರು ಸಾಮೂಹಿಕಕೃಷಿಯಲ್ಲಿ ಕೈ ಜೋಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next