ಗದಗ: ರೋಣ ಹಾಗೂ ಗದಗ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ (60) ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಶನಿವಾರ ಸೂಡಿಯಲ್ಲಿ ನಡೆಯಲಿದೆ.
ಶ್ರೀಶೈಲಪ್ಪ ಬಿದರೂರ ಅವರ ಮೃತದೇಹವನ್ನು ಬೆಂಗಳೂರಿನಿಂದ ನ. 26 ರಂದು ಬೆಳಿಗ್ಗೆ 5ಕ್ಕೆ ಗದುಗಿಗೆ ತರಲಾಗುವುದು. ಬೆಳಿಗ್ಗೆ 9ರ ವರೆಗೆ ಗದುಗಿನ ಕಳಸಾಪುರ ರಸ್ತೆಯ ಅವರ ಸ್ವಗೃಹದಲ್ಲಿ, ನಂತರ 9.30ರ ವರೆಗೆ ಗದುಗಿನ ಅವರ ಪಬ್ಲಿಕ್ ಶಾಲೆಯಲ್ಲಿ ಅಂತಿನ ದರ್ಶನಕ್ಕೆ ಇಡಲಾಗುವುದು.
ಅಲ್ಲಿಂದ ಸ್ವಗ್ರಾಮ ಗಜೇಂದ್ರಗಡ ತಾಲೂಕಿನ ಸೂಡಿಯಲ್ಲಿ ಮಧ್ಯಾಹ್ನ 3ಕ್ಕೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸಚಿವರಾದ ಸಿ.ಸಿ. ಪಾಟೀಲ ಅವರು ಗದುಗಿಗೆ ಆಗಮಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಅಂತಿಮ ಯಾತ್ರೆಯ ಏರ್ಪಾಟು ಮಾಡಿದ್ದು, ನಾಳೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.