Advertisement

ಬಿಜೆಪಿ ಸೌತ್‌ ಇಂಡಿಯನ್‌ ಸೆಲ್‌ : ಸಂಸದ ಬಾರ್ನೆ ಅವರಿಗೆ ಸಮ್ಮಾನ

04:48 PM Jul 02, 2019 | Team Udayavani |

ಪನ್ವೇಲ್‌ : ಮಾವಲ್‌ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ 2 ಲಕ್ಷ 70 ಸಾವಿರ ಮತಗಳ ಪ್ರಚಂಡ ಅಂತರದಿಂದ ಸಂಸದರಾಗಿ ಚುನಾಯಿತರಾದ ಶ್ರೀರಂಗ ಅಪ್ಪ ಬಾರ್ನೆ ಅವರನ್ನು ಇತ್ತೀಚೆಗೆ ವಾಸುದೇವ ಭಲವಂತ ಪಾಡ್ಕೆ ಸಭಾಗೃಹದಲ್ಲಿ ಸಮ್ಮಾನಿಸಲಾಯಿತು.

Advertisement

ರಾಯಘಡ ಜಿಲ್ಲಾ ಬಿಜೆಪಿ ಸೌತ್‌ ಇಂಡಿಯನ್‌ ಸೆಲ್‌ನ ಪರವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಂಸದ ಶ್ರೀರಂಗ ಬಾರ್ನೆ ಅವರನ್ನು ಶಾಲು ಹೊದೆಸಿ, ಬೃಹತ್‌ ಹೂವಿನ ಹಾರವನ್ನು ಹಾಕಿ, ಫಲಪುಷ್ಪ ಹಾಗೂ ಸ್ಮರಣಿಕೆಯೊಂದಿಗೆ ಸಮ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು.

ಈ ಸಂದರ್ಭದಲಿ ಶಾಶಕರಾದ ಪ್ರಶಾಂತ್‌ ಠಾಕೂರ್‌, ಮಾಜಿ ಸಂಸದರು ರಾಮ್‌ ಶೇs…ಜೀ ಠಾಕೂರ್‌, ನ್ಯೂಪನ್ವೇಲ್‌ನ ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ, ಬಿಜೆಪಿ ಸೌತ್‌ ಇಂಡಿಯನ್‌ ಸೆಲ್‌ ರಾಯಘಡ್‌ ಜಿ ಲ್ಲೆಯ ಅಧ್ಯಕ್ಷ ಭಾಸ್ಕರ್‌ ಶೆಟ್ಟಿ, ರಮೇಶ್‌ ನಾಯರ್‌, ಜಯಚಂದ್ರ ನಾಯರ್‌, ಗುರು ಶೆಟ್ಟಿ, ಸುಜೀತ್‌ ಪೂಜಾರಿ, ಚೇತನ್‌ ಶೆಟ್ಟಿ, ಶ್ರೀನಿವಾಸ ರಾವ್‌, ರಾಜೇಶ್‌ ಹೆಗ್ಡೆ, ಶಿವಾಜಿ ಶೆಟ್ಟಿ, ಪ್ರಸನ್ನ ಕುಮಾರ್‌, ಜಿಲ್ಲಾ ಮಹಿಳಾ ಅಧ್ಯಕ್ಷೆ ರಾಧಾ ಹಾಗೂ ಇನ್ನಿತರ ತುಳು-ಕನ್ನಡಿಗರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.