Advertisement

ಜಗತ್ತಿನಲ್ಲಿ ಶೇ.69 ವನ್ಯಜೀವಿಗಳ ಇಳಿಕೆ

08:46 PM Oct 13, 2022 | Team Udayavani |

ನವದೆಹಲಿ: ವಿಶ್ವದಲ್ಲಿ ವನ್ಯಜೀವಿಗಳ ಸಂತತಿಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. 1970ರಿಂದ 2018ರವರೆಗೆ ವನ್ಯಜೀವಿಗಳ ಪ್ರಮಾಣದಲ್ಲಿ ಶೇ.69 ಇಳಿಕೆ ಕಂಡುಬಂದಿದೆ ಎನ್ನುವ ಅಂಶ ವೈಡ್‌ ಫ‌ಂಡ್‌ ಫಾರ್‌ ನೇಚರ್‌(ಡಬ್ಲ್ಯೂಡಬ್ಲ್ಯೂಎಫ್)ನ “ಲಿವಿಂಗ್‌ ಪ್ಲಾನೆಟ್‌ ರಿಪೋರ್ಟ್‌ 2022’ನಿಂದ ತಿಳಿದುಬಂದಿದೆ.

Advertisement

ಲ್ಯಾಟಿನ್‌ ಅಮೆರಿಕ ಮತ್ತು ಕೆರಿಬಿಯನ್‌ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಶೇ.94ರಷ್ಟು ವನ್ಯಜೀವಿಗಳು ಕಡಿಮೆಯಾಗಿವೆ. ಏಷ್ಯಾ ಮತ್ತು ಫೆಸಿಪಿಕ್‌ ಪ್ರದೇಶಗಳಲ್ಲಿ ಶೇ.55, ಆಫ್ರಿಕಾದಲ್ಲಿ ಶೇ.66, ಉತ್ತರ ಅಮೆರಿಕ ಪ್ರದೇಶದಲ್ಲಿ ಶೇ.20 ಹಾಗೂ ಯುರೋಪ್‌ ಮತ್ತು ಮಧ್ಯ ಏಷ್ಯಾ ಭಾಗದಲ್ಲಿ ಶೇ.18 ಇಳಿಕೆಯಾಗಿದೆ.

ಶುದ್ಧ ಜಲದಲ್ಲಿ ವಾಸಿಸುವಂತಹ ಪ್ರಾಣಿಗಳ ಸಂಖ್ಯೆಯಲ್ಲಿ ಶೇ.83 ಇಳಿಕೆಯಾಗಿದೆ. 1970ರಿಂದ ಈಚೆಗೆ ಮೀನುಗಾರಿಕೆ ಪ್ರಮಾಣವು ಬರೋಬ್ಬರಿ 18 ಪಟ್ಟು ಹೆಚ್ಚಳವಾಗಿರುವುದರಿಂದಾಗಿ ಶಾರ್ಕ್‌ನಂತಹ ವಿಶೇಷ ಮೀನುಗಳ ಪ್ರಮಾಣದಲ್ಲೂ ಭಾರೀ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next