ಶ್ರೀನಿವಾಸಪುರ: ಎರಡು ತಿಂಗಳಿಗೊಮ್ಮೆ ಸಭೆ ನಡೆಸು ವುದಾದರೆ ನಡೆಸಿ, ವರ್ಷಕ್ಕೊಮ್ಮೆ ಮಾಡುವು ದಾದ್ರೆ ನಾವು ಬರಲ್ಲ, ಗುತ್ತಿಗೆದಾರರಿಗೆ ನೀಡದೇ ಅಧಿಕಾರಿ ಗಳು ದುರುಪಯೋಗ ಮಾಡಿರುವ ಹಣ ವಾಪಸ್ ಕಟ್ಟಿಸಿ, ಸಭೆ ನಿಗದಿ ಮಾಡಿದರೆ ಮಾತ್ರ ಈಗಿನ 2 ಕೋಟಿ ರೂ. ಕ್ರಿಯಾಯೋಜನೆಗೆ ಸಮ್ಮತಿಸುತ್ತೇವೆ ಎಂದು ಪ್ರತಿಪಕ್ಷ ಸದಸ್ಯರು ತಾಪಂ ಪ್ರಗತಿ ಪರಿಶೀಲನಾ ಸಭೆ ಬಹಿಷ್ಕರಿಸಿದ ಘಟನೆ ನಡೆಯಿತು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧ ವಾರ ಅಧ್ಯಕ್ಷ ಕೆ.ಎಂ.ನರೇಶ್ ಅಧ್ಯಕ್ಷತೆಯಲ್ಲಿ 11 ಗಂಟೆಗೆ ಕರೆದಿದ್ದ ಪ್ರಗತಿ ಪರಿಶೀಲನೆ ಮತ್ತು ಸಾಮಾನ್ಯ ಸಭೆಗೆ, 12 ಗಂಟೆಗೆ ಜೆಡಿಎಸ್ ಉಪಾಧ್ಯಕ್ಷರು ಮತ್ತು ಸದಸ್ಯರು ಬಂದರು. ಬಂದ ತಕ್ಷಣ ಸದಸ್ಯ ಎಸ್.ಎನ್.ಮಂಜುನಾಥ್ ನಾವು 10 ಸದಸ್ಯರು ಇದ್ದೇವೆ. ಅಧ್ಯಕ್ಷರು ಸಭೆಗೆ ನೀವು ಒಬ್ಬರು ಬನ್ನಿ ಎಂದು ಕರೆದಿ ದ್ದೀರಲ್ಲಾ ನಾವು ಅಗತ್ಯವಿಲ್ಲದಿದ್ದರೆ ನಮಗಾಗಿ ಸಭೆ ಯಲ್ಲಿ ಕಾಯುವುದೇನಿದೆ ಎಂದು ಅಧ್ಯಕ್ಷ ಕೆ.ಎಂ. ನರೇಶ್‌ರನ್ನು ತರಾಟೆಗೆ ತೆಗೆದುಕೊಂಡರು. ಆಗ ನಾನು ಎಲ್ಲರಿಗೂ ಕರೆ ಮಾಡಿದ್ದೇನೆ. ನಾನು ಯಾರನ್ನೂ ಬಿಟ್ಟಿಲ್ಲ ಎಂದು ಅಧ್ಯಕ್ಷರು ಸಮುಜಾಯಿಷಿ ನೀಡಿ ಸಮಾಧಾನ ಮಾಡಿದರು.
ಸುಳ್ಳು ಮಾಹಿತಿ ನೀಡಬೇಡಿ: ತಾಪಂ ಇಒ ಆನಂದ್ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಈ ಹಿಂದೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ 97 ನಡೆದು 85.5 ಲಕ್ಷ ರೂ. ವೆಚ್ಚವಾಗಿ, 12.50 ಲಕ್ಷ ರೂ. ಉಳಿದಿದೆಯೆಂದು ತಿಳಿಸಿದರು. ಇದೇ ವೇಳೆ ಪ್ರತಿಪಕ್ಷ ಸದಸ್ಯ ಮಂಜುನಾಥರೆಡ್ಡಿ, ಜಿಪಂ ಎಇಇ ಅಪ್ಪಿರೆಡ್ಡಿ ಅವರಿಂದ ಮಾಹಿತಿ ಪಡೆದು, ಇನ್ನು 4.50 ಲಕ್ಷ ರೂ. ಮಾತ್ರ ಉಳಿದಿದೆ. ನೀವು ನೋಡಿದರೆ 12.50 ಲಕ್ಷ ರೂ. ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಗುಮಾಸ್ತಗೆ ತರಾಟೆ: ಮಧ್ಯೆ ಪ್ರವೇಶಿಸಿದ ಗುಮಾಸ್ತ ಮಂಜುನಾಥ್, ಅಷ್ಟೇ ಉಳಿದಿದೆ ಎಂದು ಸಮರ್ಥಿಸಿಕೊಂಡಾಗ ಕಾಮಗಾರಿಗಳು ಮುಗಿಸಿದ್ದರೂ ಗುತ್ತಿಗೆದಾರರಿಗೆ 2 ತಿಂಗಳಿಂದ ಹಣ ಕೊಡದೇ ಸತಾಯಿಸಲಾಗುತ್ತಿದೆ. ಇರುವ ಹಣವೆಲ್ಲ ಖಾಲಿಯಾಗಿದೆ. ಗುತ್ತಿಗೆದಾರರಿಗೆ ಮಾತ್ರ ಹಣ ಸೇರಿಲ್ಲ, ನೀವೇ ಡ್ರಾ ಮಾಡಿ ಮುಗಿಸಿದ್ದೀರೆಂದು ಗುಮಾಸ್ತ ಮಂಜುನಾಥ್‌ರನ್ನು ತರಾಟೆಗೆ ತೆಗೆದುಕೊಂಡಾಗ, ಆಗಿನ ಇಒ 10 ಲಕ್ಷ ರೂ.ಒಂದೇ ಗ್ರಾಮದ ಹೆಸರಲ್ಲಿ ಡ್ರಾ ಮಾಡಿಸಿದ್ದಾರೆಂದು ಸಮಜಾಯಿಷಿ ನೀಡಿದರು.
ಅನುದಾನ ಕೊಟ್ಟಿಲ್ಲ: ಪಶು ಸಂಗೋಪನ ಇಲಾಖೆಯ ಮಾಹಿತಿ ಪ್ರಗತಿ ಪರಿಶೀಲನಾ ಕೈಪಿಡಿಯಲ್ಲಿ ಮೊದಲ ಪೇಜ್‌ನಲ್ಲಿ ಮುದ್ರಣವಾಗಿದ್ದ ಮಾಹಿತಿಯನ್ನು ಪಡೆದ ಆಡಳಿತ ಪಕ್ಷ ಸದಸ್ಯ ಶ್ರೀನಿವಾಸ್, ನಿಮ್ಮನ್ನು ಎಷ್ಟು ಸಲ ಕೇಳಿದರೂ ಮೂರ್ನಾಲ್ಕು ಮಂದಿಗೆ ಮಾತ್ರ ಅನುದಾನ ಬಂದಿದೆ ಎಂದು ಹೇಳಿ ವಿವಿದ ಯೋಜನೆಗಳಿಂದ ಕುರಿ, ಹಂದಿ, ಮೇಕೆ, ಜಾನುವಾರುಗಳ ಅಭಿವೃದ್ಧಿಗೆ 6 ಕೋಟಿ ರೂ. ವಿನಿಯೋಗವಾಗಿದೆ. ಅದರಲ್ಲೂ ನಿಮ್ಮ ಸ್ವಂತ ಗ್ರಾಮ ಗೌಡದೇನಹಳ್ಳಿಗೆ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಿ ಅನುದಾನ ನೀಡಲಾಗಿದೆ ಎಂದು ಡಾ.ಸತ್ಯನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡಾಗ, ಶಾಸಕರು ಹೇಳಿದವರಿಗೆ ಕೊಟ್ಟಿದ್ದೇನೆಂದು ಹಾರಿಕೆ ಉತ್ತರ ನೀಡಿದರು. ಇದಕ್ಕೆ ಕುಪಿತಗೊಂಡ ವಿರೋಧ ಪಕ್ಷದ ಸದಸ್ಯ ಕೃಷ್ಣಾರೆಡ್ಡಿ, ನಾವು ಜನಪ್ರತಿನಿಧಿಗಳೇ ಆಗಿದ್ದೇವೆ. ನಮ್ಮ ಮನೆಗಳಿಗೆ ಕೇಳಿಲ್ಲ. ನಾವು ಕೇಳಿದಾಗ ಯಾಕೆ ತಿಳಿಸಿಲ್ಲವೆಂದು ಪ್ರಶ್ನಿಸಿ ಕಿಡಿಕಾರಿದರು. ಇದಕ್ಕೆ ಅಧ್ಯಕ್ಷರು ದನಿಗೂಡಿಸಿ ಸದಸ್ಯರ ಗಮನಕ್ಕೆ ತರಬೇಕೆಂದು ಸಲಹೆ ನೀಡಿದರು.
ಉಳಿಕೆ ಹಣ ವಾಪಸ್ ತರಿಸಿ: ಅಧ್ಯಕ್ಷರು ಕ್ರಿಯಾ ಯೋಜನೆಗೆ ಪಟ್ಟು ಹಿಡಿದಾಗ ಹಿಂದಿನ ಬಾಕಿ ಬಿಲ್ಲು ಗಳು ಬಿಡುಗಡೆ ಮಾಡಿ, ಉಳಿಕೆ ಹಣದ ಚೆಕ್‌ಗಳನ್ನು ವಾಪಸ್ ತರಿಸಿ ನಂತರ ಸಭೆ ಕರೆಯಿರಿ. ನನಗೆ 3 ವರ್ಷದಿಂದ ಗೌರವಧನ ಕೊಟ್ಟಿಲ್ಲ. ನಾವು ಸುತುರಾಂ ಸಭೆಗೆ ಬರುವುದಿಲ್ಲವೆಂದು ಖಡಕ್ಕಾಗಿ ಹೇಳಿ ಸಭೆ ಯಿಂದ ಹೊರನಡೆದು ವಿರೋಧ ಪಕ್ಷದ ಕಚೇರಿಯಲ್ಲಿ ಕುಳಿತುಕೊಂಡಾಗ ಅಲ್ಲಿಗೂ ಸಭೆಯ ಹಾಜರಾತಿ ಪುಸ್ತಕವನ್ನು ಗುಮಾಸ್ತ ತೆಗೆದುಕೊಂಡು ಹೋದಾಗ ಆಗಿರುವ ಲೋಪ ಸರಿಪಡಿಸಿ ಸಭೆ ಕರೆದರೆ ಮಾತ್ರ ನಾವು ಸಹಿ ಹಾಕುತ್ತೇವೆ. ಇಲ್ಲವಾದರೆ ನಿಮಗೆ ಬಹು ಮತ ಇದ್ದರೆ ಕ್ರಿಯಾಯೋಜನೆ ಅನುಮೋದನೆ ನೀಡಿ ಎಂದು ಹೇಳಿದರು.