Advertisement

ಶೃಂಗೇರಿ ಶಾರದಾಂಭೆ ದೇಗುಲದಲ್ಲೂ ಸದ್ಯಕ್ಕೆ ಭಕ್ತರಿಗೆ ದರ್ಶನ ಭಾಗ್ಯವಿಲ್ಲ!

05:48 PM Jun 06, 2020 | keerthan |

ಚಿಕ್ಕಮಗಳೂರು: ಕೋವಿಡ್-19 ಲಾಕ್ ಡೌನ್ ಕಾರಣ ದೇಗುಲಗಳಲ್ಲಿ ಭಕ್ತರ ದರ್ಶನಕ್ಕೆ ಹೇರಿದ್ದ ನಿರ್ಬಂಧವನ್ನು ಸಡಿಲಿಸಲು ಸರಕಾರ ಅವಕಾಶ ನೀಡಿದ್ದು, ಜೂನ್ 8ರ ನಂತರ ದೇವಸ್ಥಾನಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಬಹುದು ಎಂದಿದೆ. ಆದರೆ ಭಕ್ತರ ಸುರಕ್ಷತೆಯ ದೃಷ್ಠಿಯಿಂದ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಇನ್ನೂ ಸ್ವಲ್ಪ ಕಾಲ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ ಎನ್ನಲಾಗಿದೆ.

Advertisement

ಪ್ರಸಿದ್ಧ ಶೃಂಗೇರಿ ದೇವಾಲಯಕ್ಕೆ ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದಲೂ ಭಕ್ತರೂ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಸದ್ಯ ಕೋವಿಡ್-19 ಸಮಸ್ಯೆ ಇರುವ ಕಾರಣ ಅನ್ಯ ರಾಜ್ಯಗಳಿಂದ ಭಕ್ತರು ಬಂದರೆ ನಿಯಂತ್ರಣ ಮಾಡುವುದು ಕಷ್ಟವಾಗಲಿದೆ. ಹೀಗಾಗಿ ಸದ್ಯ ದೇವಸ್ಥಾನ ತೆರೆಯದೇ ಇರಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.

ಇದೇ ಪ್ರಕಾರ ಜಿಲ್ಲೆಯ ಮತ್ತೊಂದು ಪ್ರಸಿದ್ಧ ಹೊರನಾಡು ದೇವಸ್ಥಾನದಲ್ಲೂ ಇದೇ ರೀತಿ ನಿರ್ಣಯ ಮಾಡಲಾಗಿದೆ. ಅಲ್ಲೂ ಸದ್ಯಕ್ಕೆ ದೇವಿ ದರ್ಶನ ಪಡೆಯಲು ಅವಕಾಶ ಇಲ್ಲ ಎನ್ನಲಾಗಿದೆ.

ಸಾಮಾನ್ಯವಾಗಿ ಜಿಲ್ಲೆಗೆ ಬರುವ ಭಕ್ತರು ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಸದ್ಯ ಕೋವಿಡ್-19 ಸೋಂಕು ಸಂಕಷ್ಟದ ಸಮಯದಲ್ಲಿ ಇನ್ನಷ್ಟು ಮುಂಜಾಗೃತಾ ಕ್ರಮವಾಗಿ ಎರಡೂ ದೇವಸ್ಥಾನಗಳಲ್ಲಿ ಈ ನಿರ್ಣಯ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next