Advertisement

ಹೆಸರಿಗೆ ಉದ್ಯಾನ: ಬರೀ ಅದ್ವಾನ

03:55 PM Oct 11, 2019 | Naveen |

„ರಮೇಶ್‌ ಕರುವಾನೆ
ಶೃಂಗೇರಿ: ಪಟ್ಟಣದ ಎರಡನೇ ವಾರ್ಡಿನಲ್ಲಿರುವ ಮಕ್ಕಳ ಉದ್ಯಾನವನ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿದ್ದು, ಇದೀಗ ನಿರ್ವಹಣೆ ಕೊರತೆಯಿಂದ ಮಕ್ಕಳ ಆಟೋಟದಿಂದ ದೂರವಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

Advertisement

ಮಲೆನಾಡಿನ ಪ್ರದೇಶವಾದರೂ ಪಟ್ಟಣದಲ್ಲಿ ಗಿಡ, ಮರಗಳೇ ಇಲ್ಲವಾಗಿದೆ. ಇಕ್ಕಟ್ಟಾದ ಪಟ್ಟಣದಲ್ಲಿ ಒಂದು ಬದಿ ನದಿ ಇದ್ದು, ಇರುವ ಜಾಗದಲ್ಲಿ ಮನೆಗಳು ನಿರ್ಮಾಣವಾಗಿವೆ. 30 ವರ್ಷದ ಹಿಂದೆ ನಿರ್ಮಾಣವಾದ ನೂತನ ಬಡಾವಣೆ ಶಾರದಾ ನಗರದಲ್ಲಿ ಪಪಂ ಮಕ್ಕಳಿಗಾಗಿ ಉದ್ಯಾನವನ ಹಾಗೂ ಅದಕ್ಕೆ ಸುತ್ತಲೂ ಕಾಂಪೌಂಡ್‌ ನಿರ್ಮಿಸಿದೆ.

ಉದ್ಯಾನದಲ್ಲಿ ವಿವಿಧ ಜಾತಿಯ ಗಿಡವನ್ನು ನೆಡಲಾಗಿತ್ತು. ಇದರೊಂದಿಗೆ ಮಕ್ಕಳಿಗಾಗಿ ಜಾರು ಬಂಡಿ, ಜೋಕಾಲಿ ಮತ್ತಿತರ ಆಟಿಕೆ ವಸ್ತುವನ್ನು ಅಳವಡಿಸಲಾಗಿತ್ತು. ಸೋಲಾರ್‌ ದೀಪವನ್ನು ಅಳವಡಿಸಲಾಗಿತ್ತು. ನೀರಿನ ಕಾರಂಜಿ, ಬೆಳಗ್ಗೆ- ಸಂಜೆ ಕಾಲ್ನಡಿಗೆ ಮಾಡುವವರಿಗೆ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ. ಉದ್ಯಾನವನಕ್ಕೆ ಅಲ್ಪ ಜಾಗವಿದ್ದರೂ ಪಟ್ಟಣದ ಏಕೈಕ ಪಾರ್ಕ್‌ ಇದಾಗಿದ್ದರಿಂದ ಸಾರ್ವಜನಿಕರು ಬೆಳಗ್ಗೆ ಮತ್ತು ಸಂಜೆ ಇಲ್ಲಿಗೆ ಬರುತ್ತಿದ್ದರು.

ನಿರ್ವಹಣೆ ಕೊರತೆಯಿಂದ ಇದೀಗ ಉದ್ಯಾನವನವೇ ಹಾಳಾಗಿದ್ದು, ಮಕ್ಕಳ ಆಟಿಕೆ ವಸ್ತುಗಳು ಉಪಯೋಗಿಸಲಾಗದಷ್ಟು ಹಾಳಾಗಿವೆ. ಉದ್ಯಾನದಲ್ಲಿ ಗಿಡ, ಗಂಟಿ ಬೆಳೆದಿದ್ದು, ಇದರಿಂದ ಹಾವು ಚೇಳುಗಳ ವಾಸ ಸ್ಥಾನವಾಗಿದೆ. ನೀರಿನ ಕಾರಂಜಿಯಲ್ಲಿ ನೀರು ಇಲ್ಲ, ನೀರಿನ ಪೂರೈಕೆಯೂ ಇಲ್ಲದೇ ಸೊರಗಿದೆ. ಬೇಸಿಗೆಯಲ್ಲಿ ಗಿಡಗಳಿಗೆ ನೀರಿಲ್ಲದೇ ಸೊರಗುತ್ತವೆ. ಶುದ್ಧ ಗಾಳಿ ಸೇವನೆ, ನೆಮ್ಮದಿಗಾಗಿ ಬರುವ ಸಾರ್ವಜನಿಕರು ಸ್ವಚ್ಛತೆ ಇಲ್ಲದಿರುವ ಉದ್ಯಾನದೊಳಕ್ಕೆ ಬರಲು ಹೆದರುವಂತಾಗಿದೆ. ಪಾದಚಾರಿ ಮಾರ್ಗದ ಸುತ್ತಲೂ ಕಳೆ ಬೆಳೆದು ಪಾದಚಾರಿ ಮಾರ್ಗವೇ ಮುಚ್ಚಿ ಹೋಗುತ್ತಿದೆ.ಪಾರ್ಕಿನಲ್ಲಿ
ಅಂಗನವಾಡಿಯೊಂದಕ್ಕೆ ಅವಕಾಶ ನೀಡಲಾಗಿದ್ದು, ಮಕ್ಕಳು ಗಿಡಗಂಟಿಗಳ ನಡುವೆ ಇರುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next