Advertisement

ಉಚಿತ ಪ್ರಯಾಣ ಪ್ರಭಾವ: ಡ್ರೈವರ್ ಸೀಟಲ್ಲೇ ಬಸ್ ಹತ್ತಿದ ಮಹಿಳೆ

10:46 AM Jun 18, 2023 | Team Udayavani |

ಚಿಕ್ಕಮಗಳೂರು: ಬಸ್ ತುಂಬಾ ರಶ್ಶು ಎಂದು ಮಹಿಳೆಯೊಬ್ಬರು ಡ್ರೈವರ್ ಸೀಟಲ್ಲಿ ಬಸ್ ಹತ್ತಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

Advertisement

ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಶೃಂಗೇರಿಗೆ ಜನ ಸಾಗರ ಹರಿದು ಬತ್ತಿತ್ತು. ಬಸ್ ಬಂದ ಕೂಡಲೇ ಬಸ್ಸಿಗೆ ಮಹಿಳೆಯರು ಮುತ್ತಿಕೊಳ್ಳುತ್ತಿದ್ದಾರೆ. ಬಸ್ಸಿಗೆ ಹತ್ತಲು ಕಷ್ಟವಾದ ಕಾರಣ ಮಹಿಳೆ ಮಕ್ಕಳನ್ನು ಡ್ರೈವರ್ ಸೀಟಲ್ಲಿ ಹತ್ತಿಸಿ, ತಾನೂ ಅಲ್ಲೇ ಬಸ್ ಏರಿದ್ದಾರೆ.

ರಾಜ್ಯ ಸರ್ಕಾರದ ಉಚಿತ ಪ್ರಯಾಣದ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next