Advertisement

ನಡುಗಡ್ಡೆಯಲ್ಲಿ ಸಿಲುಕಿದ ನಗರಗಡ್ಡಿ ಶ್ರೀ ಶಿವಶಾಂತವೀರ ಸ್ವಾಮೀಜಿ

07:11 PM Aug 11, 2019 | sudhir |

ಕೊಪ್ಪಳ: ಜಾನುವಾರುಗಳ ರಕ್ಷಣೆಗೆಂದು ತೆರಳಿದ ನಗರಗಡ್ಡಿ ಮಠದ ಶ್ರೀ ಶಿವಶಾಂತವೀರ ಸ್ವಾಮೀಜಿಗಳು ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಲು ಬಿಟ್ಟ ಪರಿಣಾಮ ತಾಲೂಕಿನ ಶಿವಪುರ ಸಮೀಪದ ನಡುಗಡ್ಡೆಯಲ್ಲಿ ಸಿಲುಕಿದ್ದಾರೆ.

Advertisement

ನಗರಗಡ್ಡಿ ಮಠವು ತುಂಗಭದ್ರಾ ನೀರು ಹರಿಯುವ ಮಧ್ಯದ ಗುಡ್ಡದ ಪ್ರದೇಶವಾಗಿದೆ .ಜಲಾಶಯದ ನೀರನ್ನು ನದಿಗೆ ಬಿಟ್ಟ ಪರಿಣಾಮ ಈ ಪ್ರದೇಶವು ನಡುಗಡ್ಡೆಯಂತಾಗಿರುತ್ತದೆ. ಈ ಬಾರಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿ ಬಿಟ್ಟ ಹಿನ್ನೆಲೆಯಲ್ಲಿ ಮಠವು ನಡುಗಡ್ಡೆಯಾಗಿದೆ.

ಶನಿವಾರ ಸಂಜೆ ಮಠದಲ್ಲಿನ ಏಳು ಜಾನುವಾರುಗಳನ್ನು ರಕ್ಷಣೆ ಮಾಡಲು ತೆರಳಿದ್ದ ಸ್ವಾಮೀಜಿಗಳು ನದಿಯ ನೀರು ಹೆಚ್ಚಾಗಿದ್ದರಿಂದ
ಭಾನುವಾರ ತೆರಳೋಣವೆಂದು ಮಠದಲ್ಲಿಯೇ ಉಳಿದುಕೊಂಡಿದ್ದರು. ಆದರೆ ಮಠದ ಸುತ್ತಲೂ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ನಡುಗಡ್ಡೆಯಲ್ಲೇ ಸಿಲುಕಿದ್ದಾರೆ.

ಮಠವು ಗುಡ್ಡದಲ್ಲಿ ಎತ್ತರ ಪ್ರದೇಶದಲ್ಲಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಈ ಕುರಿತಂತೆ ಕೊಪ್ಪಳ ತಹಸೀಲ್ದಾರ್ ಜೆ.ಬಿ. ಮಜ್ಜಗಿ ಸೇರಿದಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ ಮಠಕ್ಕೆ ತೆರಳಿ ಸುರಕ್ಷಿತ ಸ್ಥಳಕ್ಕೆ ಧಾವಿಸುವಂತೆ ಶ್ರೀಗಳಿಗೆ ಮನವಿ ಮಾಡಿದ್ದರು.

ಆದರೆ ಜಾನುವಾರು ಸಮೇತ ಬರುವುದಾಗಿ ಸ್ವಾಮೀಜಿ ಹೇಳಿದ್ದರು. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಪ್ರಸ್ತುತ ಮಠದಲ್ಲಿಯೇ ಶ್ರೀಗಳು ಸುರಕ್ಷಿತವಾಗಿ ಉಳಿದುಕೊಂಡಿದ್ದಾರೆ. ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ಬಳಿಕವಷ್ಟೆ ಶ್ರೀಗಳಿಗೆ ಜನವಸತಿ ಪ್ರದೇಶಕ್ಕೆ ಸಂಪರ್ಕ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next