Advertisement

ಶ್ರೀ ಸತ್ಯಪರಾಕ್ರಮ ತೀರ್ಥರ ಆರಾಧನೆ

11:30 AM Oct 15, 2018 | |

ಮುದಗಲ್ಲ: ಸಮೀಪದ ಕೃಷ್ಣಾ ನದಿ ದಡದ ಚಿತ್ತಾಪುರ ಗ್ರಾಮದ ಶ್ರೀ ಸತ್ಯಪರಾಕ್ರಮ ತೀರ್ಥ ಉತ್ತರಾದಿಮಠದಲ್ಲಿ ನವರಾತ್ರಿ ಉತ್ಸವ ಹಾಗೂ ಶ್ರೀ ಸತ್ಯಪರಾಕ್ರಮ ತೀರ್ಥರ ಆರಾಧನೆ ಅಂಗವಾಗಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Advertisement

ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥರಿಂದ ಅ.19ರ ವರೆಗೆ ನವರಾತ್ರಿ ಕಾರ್ಯಕ್ರಮ ನಡೆಯುತ್ತಿವೆ. ಅ.16, 17, 18 ರಂದು ಶ್ರೀ ಸತ್ಯಪರಾಕ್ರಮ ತೀರ್ಥರ ಆರಾಧನಾ ಮಹೋತ್ಸವ ನಡೆಯಲಿದ್ದು, 19ರಂದು ಮಧ್ವ ಜಯಂತಿ ಆಚರಣೆ ನಡೆಯಲಿದೆ.

ಶ್ರೀ ಸತ್ಯಾತ್ಮತೀರ್ಥರ ಅನುಗ್ರಹ ಆದೇಶದಂತೆ ನಿತ್ಯವೂ ಬೆಳಗ್ಗೆಯಿಂದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಬೆಳಗಿನ ಜಾವ ಶ್ರೀಗಳಿಂದ ಶಿಷ್ಯಂದಿರಿಗೆ ಪಾಠ ಹಾಗೂ ಧಾರ್ಮಿಕ ಕಾರ್ಯಕ್ರಮ, ಭಕ್ತರಿಗೆ ಮುದ್ರಾಧಾರಣೆ, ಭಕ್ತರಿಂದ
ಶ್ರೀಸತ್ಯಾತ್ಮತೀರ್ಥರ ಪಾದ ಪೂಜೆಗೆ ಅವಕಾಶ ನೀಡಲಾಗಿದೆ. ನಂತರ ದಂಡೋದಕ ಸ್ನಾನ, ಪೂಜೆ, ಪ್ರವಚನ ನಡೆಯುತ್ತಿವೆ. ತದನಂತರ ಬಂದ ಭಕ್ತ ಸಮೂಹಕ್ಕೆ ಮುದ್ರಾಧಾರಣೆ ಕಾರ್ಯಕ್ರಮ ನಡೆಯುತ್ತಿವೆ.

ರಾಯಚೂರು ಸೇರಿದಂತೆ ನೆರೆಯ ಜಿಲ್ಲೆಗಳ ನೂರಾರು ಭಕ್ತರು ಭಾಗವಹಿಸುತ್ತಿದ್ದಾರೆ. ಶ್ರೀ ಸತ್ಯಪರಾಕ್ರಮತೀರ್ಥರ ಮೂಲ ವಂಶಸ್ಥರಾದ ಜಹಾಗೀರದಾರ ವಂಶಜರು ಭಕ್ತರಿಗೆ ಸೌಲಭ್ಯ ಒದಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next