Advertisement

Education: ಮದರಸಾದಲ್ಲಿ ಓದುವ ಮಕ್ಕಳು ಶ್ರೀರಾಮನಂತೆ ಆಗಬೇಕು: ವಕ್ಫ್ ಬೋರ್ಡ್ ಅಧ್ಯಕ್ಷ

01:03 PM Jan 26, 2024 | Team Udayavani |

ಉತ್ತರಾಖಂಡ: ಮುಂಬರುವ ಮಾರ್ಚ್‌ನಲ್ಲಿ ಪ್ರಾರಂಭವಾಗುವ ಹೊಸ ಅಧಿವೇಶನಡಾ ಬಳಿಕ ಉತ್ತರಾಖಂಡ್ ವಕ್ಫ್ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಮದರಸಾಗಳಲ್ಲಿ ಭಗವಾನ್ ರಾಮನ ಕಥೆಯನ್ನು ಹೊಸ ಪಠ್ಯಕ್ರಮದ ಭಾಗವಾಗಿ ಮಾಡಲಾಗುವುದು ಎಂದು ವಕ್ಫ್ ಬೋರ್ಡ್ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿದ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಅವರು, ಮದರಸಾಗಳಲ್ಲಿ ಓದುತ್ತಿರುವ ಮಕ್ಕಳು ಔರಂಗಜೇಬ್‌ನಂತೆ ಆಗಬಾರದು ಬದಲಾಗಿ ಭಗವಾನ್ ಶ್ರೀರಾಮನಂತೆ ಆಗಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ಮದರಸಾ ವಿದ್ಯಾರ್ಥಿಗಳಿಗೆ ಪ್ರವಾದಿ ಮೊಹಮ್ಮದ್ ಮತ್ತು ಭಗವಾನ್ ರಾಮನ ಜೀವನ ಕಥೆಯನ್ನು ಕಲಿಸಲಾಗುವುದು ಎಂದು ಅವರು ಹೇಳಿದರು. ಅನುಭವಿ ಮುಸ್ಲಿಂ ಧರ್ಮಗುರುಗಳು ಕೂಡ ಈ ಕ್ರಮವನ್ನು ಅನುಮೋದಿಸಿದ್ದಾರೆ. ಶಾದಾಬ್ ಶಾಮ್ಸ್ . ಶ್ರೀರಾಮನು ತೋರಿಸಿದ ಮೌಲ್ಯಗಳು ಅವರ ಧರ್ಮ ಅಥವಾ ನಂಬಿಕೆಯನ್ನು ಲೆಕ್ಕಿಸದೆ ಎಲ್ಲರೂ ಅನುಸರಿಸಲು ಅರ್ಹವಾಗಿವೆ ಎಂದು ಹೇಳಿದರು.

ವಕ್ಫ್ ಬೋರ್ಡ್ ಅಡಿಯಲ್ಲಿ 117 ಮದರಸಾಗಳಿವೆ ಮತ್ತು ಆಧುನಿಕ ಪಠ್ಯಕ್ರಮವನ್ನು ಡೆಹ್ರಾಡೂನ್, ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳ ಮದರಸಾಗಳಲ್ಲಿ ಆರಂಭದಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು. ಈ ವರ್ಷದ ಮಾರ್ಚ್‌ನಿಂದ ನಮ್ಮ ಮದರಸಾ ಆಧುನೀಕರಣ ಕಾರ್ಯಕ್ರಮದ ಅಂಗವಾಗಿ ವಕ್ಫ್ ಬೋರ್ಡ್‌ಗೆ ಸಂಯೋಜಿತವಾಗಿರುವ ಮದರಸಾಗಳಲ್ಲಿ ಶ್ರೀರಾಮನ ಅಧ್ಯಯನವನ್ನು ಪ್ರಾರಂಭಿಸಲಾಗುವುದು ಎಂದು ಶಮ್ಸ್ ಹೇಳಿದರು.

ಇದನ್ನೂ ಓದಿ: Udupi; ಶೆಟ್ಟರ್ ಬಿಜೆಪಿ ಸೇರಿದ್ದು ನೋಡಿ ದಿಗ್ಭ್ರಮೆಯಾಯಿತು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Advertisement
Advertisement

Udayavani is now on Telegram. Click here to join our channel and stay updated with the latest news.

Next