Advertisement

2024ರ ಜನವರಿಯಲ್ಲಿ ರಾಮಮಂದಿರ ದರ್ಶನಕ್ಕೆ ಮುಕ್ತ

09:52 PM Oct 25, 2022 | Team Udayavani |

ಅಯೋಧ್ಯೆ: 2024ರ ಜನವರಿಯ ಮಕರ ಸಂಕ್ರಾಂತಿಯಂದು ಆಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಭಗವಂತ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆಯ ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮಾಹಿತಿ ನೀಡಿದರು.

Advertisement

“ಪ್ರಸ್ತುತ ದೇಗುಲದಲ್ಲಿ ಶೇ.50ರಷ್ಟು ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಯಲ್ಲಿ ಒಟ್ಟಾರೆ ಪ್ರಗತಿ ತೃಪ್ತಿದಾಯಕವಾಗಿದೆ. ರಾಮನ ದೇಗುಲ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ರೂ. ವೆಚ್ಚವಾಗಲಿದೆ. ಮುಂದಿನ ವರ್ಷ ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅವರು ತಿಳಿಸಿದರು.

2020ರ ಆ.5ರಂದು ಅಯೋಧ್ಯೆ ರಾಮ ದೇಗುಲ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದರು.

ನೀಲನಕ್ಷೆಯ ಪ್ರಕಾರ, 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ರಾಮ ದೇಗುಲದ ಆವರಣದಲ್ಲಿ ವಾಲ್ಮೀಕಿ, ಕೇವತ್‌, ಶಬರಿ, ಜಟಾಯು, ಸೀತೆ, ಗಣೇಶ ಮತ್ತು ಲಕ್ಷ್ಮಣ ದೇವರ ದೇಗುಲಗಳನ್ನು ನಿರ್ಮಿಸಲಾಗುತ್ತಿದೆ. ಜತೆಗೆ ದೇವಾಲಯದ ಸುತ್ತಮುತ್ತಲಿನ ರಸ್ತೆಗಳು ಮತ್ತು ಪಥಗಳನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next