ತೆಕ್ಕಟ್ಟೆ: ಇತಿಹಾಸ ಪ್ರಸಿದ್ದ ತೆಕ್ಕಟ್ಟೆ ಶ್ರೀ ಉಮಾಮಹೇಶ್ವರ ದೇವಸ್ಥಾನ ( ಶ್ರೀ ಮಹಾಲಿಂಗೇಶ್ವರ ದೇವಸ್ಥಾನ) ದಲ್ಲಿ ಬ್ರಹ್ಮಕುಂಭಾಭಿಷೇಕ ಹಾಗೂ ಶಯ್ಯೋತ್ಸವ ರಂಗಪೂಜೆಯು ಮಾ.7 ಶನಿವಾರದಿಂದ ಮಾ.12 ಗುರುವಾರದ ವರೆಗೆ ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮಗಳು ಮಾ.7 ಶನಿವಾರದಂದು ಬೆಳಗ್ಗೆ ಗಂಟೆ 8.30ಕ್ಕೆ ಪ್ರಾರ್ಥನೆ, ತೋರಣ ಮುಹೂರ್ತ, ನಾಂದಿ ಪುಣ್ಯಾಹ, ಪಂಚಗವ್ಯ ಹೋಮ, ಮಹಾಗಣಪತಿ ಹೋಮ, ನವಗ್ರಹ ಹೋಮ, ಮಹಾಪೂಜೆ. ಸಂಜೆ ಗಂಟೆ 5ರಿಂದ ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ,ಗಣಪತಿ ಮತ್ತು ಶಾಸ್ತ್ರ ಬಿಂಬಧಿವಾಸ, ರಾತ್ರಿ ಪೂಜೆ ನಡೆಯಲಿದೆ. ಮಾ.8 ರವಿವಾರದಂದು ಬೆಳಗ್ಗೆ ಗಂಟೆ 7.30ಕ್ಕೆ ಗಣಪತಿ ಮತ್ತು ಶಾಸ್ತ್ರ ಬಿಂಬ ಪುನಃ ಪ್ರತಿಷ್ಠೆ, ಶ್ರೀ ಉಮಾಮಹೇಶ್ವರ ದೇವರಿಗೆ ಬಿಂಬ ಶುದ್ಧಿ ಪ್ರಕ್ರಿಯೆ, ಸಪರಿವಾರ ನಾಗಬ್ರಹ್ಮ ಪ್ರತಿಷ್ಠಾ ವಿಧಾನ, ಪ್ರಾಯಶ್ಚಿತ ಹೋಮ, ಪಂಚ ವಿಂಶತಿ ಸ್ನಪನ ಕಲಶ, ಪ್ರಸನ್ನ ಪೂಜೆ ಹಾಗೂ ಸಂಜೆ ಗಂಟೆ 5ಕ್ಕೆ ಆಶ್ಲೇಷಾ ಬಲಿ, ಸುದರ್ಶನ ಹೋಮ .
ಮಾ.9 ಸೋಮವಾರದಂದು ಸಂಜೆ ಗಂಟೆ 8ರಿಂದ ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಸಂಜೆ ಗಂಟೆ 5 ರಿಂದ ದಿಕಾಲ ಹೋಮ, ಬಲಿಕಲ್ಲು ಪ್ರತಿಷ್ಠೆ, ಮಹಾಬಲಾಪೀಠ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದೆ.
ಮಾ.10 ಮಂಗಳವಾರದಂದು ಸಂಜೆ ಗಂಟೆ 7ರಿಂದ ತತ್ರÌಹೋಮ, ಗಣಪತಿ ಹಾಗೂ ಶಾಸ್ತ್ರ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಹಾಗೂ ಸಂಜೆ ಗಂಟೆ 5 ರಿಂದ ಭದ್ರಕ ಮಂಡಲಪೂಜೆ , ಚೋರ ಶಾಂತಿ ಹಾಗೂ ಮಾ.11 ಬುಧವಾರದಂದು ಬೆಳಗ್ಗೆ 108 ಕಲಶಾಭಿಷೇಕ , ಅಧಿವಾಸ ಹೋಮ, ಬೆಳಗ್ಗೆ ಗಂಟೆ 10.20ಕ್ಕೆ ಬ್ರಹ್ಮಕುಂಭಾಭಿಷೇಕ, ನ್ಯಾಸ ಪೂಜೆ, ಅವಸೃತ ಬಲಿ, ಮಹಾಪೂಜೆ ಹಾಗೂ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಶಿವಾನಿ ಮ್ಯೂಸಿಕಲ್‌ನ ಕೆ.ನವೀಚಂದ್ರ ಕೊಪ್ಪ ಅವರ ಸಾರಥ್ಯದಲ್ಲಿ ರಾತ್ರಿ ಗಂಟೆ 8.30ಕ್ಕೆ ಅದ್ಧೂರಿ ಸಂಗೀತ ರಸಮಂಜರಿ ಗಾನ ಲಹರಿ ಹಾಗೂ ಫಿಲ್ಮಿ ಡ್ಯಾನ್ಸ್ ಸಂಗೀತ ಪ್ರದರ್ಶನಗೊಳ್ಳಲಿದೆ.